ಸೌದಿ ಅರೇಬಿಯಾ: ಮಸೀದಿಗಳಲ್ಲಿ ಶುಕ್ರವಾರದ ನಮಾಝ್ ಗೆ ಅವಕಾಶ

Update: 2020-05-27 09:26 GMT

ರಿಯಾದ್: ಕೊರೋನ ವೈರಸ್ ಹಿನ್ನೆಲೆಯಲ್ಲಿ ಜಾರಿಯಾಗಿದ್ದ ಲಾಕ್ ಡೌನ್ ಸಡಿಲಿಕೆ ಮಾಡಿ ಈ ವಾರದಿಂದ ಸೌದಿ ಅರೇಬಿಯಾದಲ್ಲಿ ಮಸೀದಿಗಳಲ್ಲಿ ಶುಕ್ರವಾರದ ನಮಾಝ್ ಗೆ ಅವಕಾಶ ನೀಡಲಾಗಿದೆ.

ಮೇ 31ರಿಂದ ಜೂನ್ 20ರವರೆಗೆ ಮಕ್ಕಾ ಹೊರತುಪಡಿಸಿ ಬೇರೆಡೆಗಳಲ್ಲಿ ಶುಕ್ರವಾರದ ನಮಾಝ್ ಗಾಗಿ ಮಸೀದಿಗಳು ಬಾಗಿಲು ತೆರೆಯಲಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

“ಮಸೀದಿಗೆ ಬರುವವರು 2 ಮೀಟರ್ ಗಳ ಅಂತರ ಕಾಪಾಡಿಕೊಳ್ಳಬೇಕು. ಎರಡು ಸಾಲುಗಳ ನಡುವೆ ಒಂದು ಸಾಲನ್ನು ಖಾಲಿ ಬಿಡಬೇಕು” ಎಂದು ಸಚಿವಾಲಯ ತಿಳಿಸಿದೆ.

ಎಲ್ಲರು ಫೇಸ್ ಮಾಸ್ಕ್ ಗಳನ್ನು ಧರಿಸಬೇಕು. ಮುಸಲ್ಲಾಗಳನ್ನು (ಪ್ರಾರ್ಥನೆಯ ಚಾಪೆ)ಗಳನ್ನು ತರಬೇಕು ಮತ್ತು ಅಂಗಸ್ನಾನವನ್ನು ಮನೆಯಲ್ಲೇ ಮಾಡಿ ಬರಬೇಕು. 15 ವರ್ಷಕ್ಕಿಂತ ಕೆಳ ವಯಸ್ಸಿನ ಬಾಲಕರಿಗೆ ಪ್ರವೇಶವಿಲ್ಲ. ಮಸೀದಿ ಪ್ರವೇಶ ಮತ್ತು ಹೊರ ಹೋಗುವಾಗ ಜನರು ಗುಂಪುಗೂಡದಂತೆ ಇಮಾಮ್ ಗಳು ಮುನ್ನೆಚ್ಚರಿಕೆ ವಹಿಸಬೇಕು. ವಾಟರ್ ಕೂಲರ್ ಗಳು , ಆಹಾರ ವಿತರಣೆಗೆ ಅವಕಾಶವಿಲ್ಲ. ಮಿಸ್ವಾಕ್ ಕೂಡ ವಿತರಿಸಬಾರದು.  ಅಂಗಸ್ನಾನದ ಜಾಗಗಳು ಮತ್ತು ಶೌಚಾಲಯವನ್ನು ಮಸೀದಿಗಳು ಮುಚ್ಚಬೇಕು ಎಂದು ಸೂಚನೆ ನೀಡಲಾಗಿದೆ.

ಮುಂದಿನ ಆದೇಶದವರೆಗೆ ಹಜ್ ಮತ್ತು ಉಮ್ರಾ ಯಾತ್ರೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News