ವಿತರಣಾ ಘಟಕದ ಮಾರಾಟಕ್ಕೆ ಬಿಡ್ ಸ್ವೀಕರಿಸಿದ ಎನ್‌ಎಮ್‌ಸಿ ಹೆಲ್ತ್

Update: 2020-05-27 16:37 GMT

ದುಬೈ, ಮೇ 27: ತನ್ನ ವಿತರಣಾ ಘಟಕ ಎನ್‌ಎಮ್‌ಸಿ ಟ್ರೇಡಿಂಗನ್ನು ಮಾರಾಟ ಮಾಡಲು ಮುಂದಾಗಿರುವ ಬಿ.ಆರ್. ಶೆಟ್ಟಿ ಒಡೆತನದ ಎನ್‌ಎಮ್‌ಸಿ ಹೆಲ್ತ್‌ಕೇರ್ ಸಂಸ್ಥೆಯು, ಅದಕ್ಕಾಗಿ ಆಸಕ್ತರಿಂದ ಬಿಡ್‌ಗಳನ್ನು ಸ್ವೀಕರಿಸಿದೆ ಎಂದು ಮೂಲಗಳು ತಿಳಿಸಿವೆ.

ಎನ್‌ಎಮ್‌ಸಿ ಹೆಲ್ತ್ ಈಗಾಗಲೇ ನೂರಾರು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ ಹಾಗೂ ಅನಗತ್ಯವೆಂದು ಪರಿಗಣಿಸಲಾಗಿರುವ ಪ್ರತ್ಯೇಕ ವಿತರಣಾ ಘಟಕದ ಹೊರೆಯಿಂದ ಕಳಚಿಕಕೊಳ್ಳಲು ಮುಂದಾಗಿದೆ. ಈ ವಿತರಣಾ ಘಟಕವನ್ನು ನಡೆಸಲು ಅಧಿಕ ಕಾರ್ಯಕಾರಿ ಬಂಡವಾಳದ ಅಗತ್ಯವಿದೆ ಎಂದು ಕಂಪೆನಿ ಭಾವಿಸಿದೆ. ಅದೂ ಅಲ್ಲದೆ, ಇದರ ಮಾರಾಟದಿಂದ ಬರುವ ಹಣದಿಂದ ಕೆಲವು ಸಾಲಗಳನ್ನು ತೀರಿಸುವ ಲೆಕ್ಕಾಚಾರವನ್ನು ಅದು ಹೊಂದಿದೆ ಎನ್ನಲಾಗಿದೆ.

ವಿತರಣಾ ಉದ್ಯಮದಲ್ಲಿ ಬಲವಾದ ಆಸಕ್ತಿಯಿರುವವರು ಇದ್ದಾರೆ. ಈ ಘಟಕದ ಹೊರೆಯನ್ನು ಶೀಘ್ರವೇ ಎನ್‌ಎಮ್‌ಸಿ ಕಳಚಿಕೊಳ್ಳುವುದು ಎಂದು ಮೂಲವೊಂದು ತಿಳಿಸಿದೆ ಎಂದು ಯುಎಇ ಪತ್ರಿಕೆ ಖಲೀಜ್ ಟೈಮ್ಸ್ ವರದಿ ಮಾಡಿದೆ.

ವಿವಿಧ ಬ್ಯಾಂಕ್‌ಗಳಿಗೆ ನಕಲಿ ದಾಖಲೆಗಳನ್ನು ಸಲ್ಲಿಸಿ ಅಗಾಧ ಪ್ರಮಾಣದಲ್ಲಿ ಸಾಲಗಳನ್ನು ಪಡೆದು ಮರುಪಾವತಿ ಮಾಡದಿರುವ ಆರೋಪಗಳನ್ನು ಕಂಪೆನಿ ಎದುರಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News