ಸೌದಿ ಅರೇಬಿಯ: 90,000ಕ್ಕೂ ಹೆಚ್ಚು ಮಸೀದಿಗಳು ನಾಳೆ ಪುನರಾರಂಭ

Update: 2020-05-29 17:20 GMT
ಸಾಂದರ್ಭಿಕ ಚಿತ್ರ

ರಿಯಾದ್ (ಸೌದಿ ಅರೇಬಿಯ), ಮೇ 29: ಮಕ್ಕಾ ಹೊರತುಪಡಿಸಿ ಸೌದಿ ಅರೇಬಿಯದಲ್ಲಿರುವ ಎಲ್ಲ ಮಸೀದಿಗಳು ರವಿವಾರ ತೆರೆಯುತ್ತವೆ ಎಂದು ದೇಶದ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ಶುಕ್ರವಾರ ತಿಳಿಸಿದೆ.

ಅದಕ್ಕೂ ಮುನ್ನ ನೂತನ-ಕೊರೋನ ವೈರಸ್ ಸಾಂಕ್ರಾಮಿಕ ಹರಡುವುದನ್ನು ತಡೆಯುವುದಕ್ಕಾಗಿ ಎಲ್ಲ ಮಸೀದಿಗಳನ್ನು ಸ್ವಚ್ಛಗೊಳಿಸಲಾಗುತ್ತದೆ ಹಾಗೂ ಉತ್ತಮ ರೀತಿಯಲ್ಲಿ ನಿರ್ವಹಿಸಲಾಗುತ್ತದೆ ಎಂದು ಅದು ಹೇಳಿದೆ.

ದೇಶದಲ್ಲಿರುವ 90,000ಕ್ಕೂ ಅಧಿಕ ಸಣ್ಣ ಮತ್ತು ದೊಡ್ಡ ಮಸೀದಿಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಆರಂಭಿಸಲು ಸಚಿವಾಲಯದ ಸಿಬ್ಬಂದಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ಎರಡು ತಿಂಗಳಿಗೂ ಅಧಿಕ ಅವಧಿಯ ಬಳಿಕ ದೇಶದ ಮಸೀದಿಗಳು ತೆರಯುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News