ಸೌದಿ: ಕೋವಿಡ್-19 ಸಾವಿನ ಸಂಖ್ಯೆ 549ಕ್ಕೇರಿಕೆ

Update: 2020-06-03 18:10 GMT

ದುಬೈ,ಜೂ.3: ಸೌದಿ ಅರೇಬಿಯದಲ್ಲಿ ಕಳೆದ 24 ತಾಸುಗಳಲ್ಲಿ 24 ಮಂದಿ ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದು, 1869 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೌದಿಯಲ್ಲಿ ಕೊರೋನ ಸೋಂಕಿನ ಒಟ್ಟು ಪ್ರಕರಣ 89,011ಕ್ಕೇರಿದ್ದು, ಒಟ್ಟು 549 ಮಂದಿ ಸಾವನ್ನಪ್ಪಿದ್ದಾರೆ.

ಈ ಮಧ್ಯೆ ಸೌದಿಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ 1264 ಮಂದಿಯ ಪರಿಸ್ಥಿತಿ ಗಂಭೀರವಾಗಿದೆಯೆಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಮೃತರಲ್ಲಿ ತಿರುವನಂತಪುರದ ನಿವಾಸಿಯೊಬ್ಬರು ಕೂಡಾ ಸೇರಿದ್ದಾರೆಂದು ತಿಳಿದುಬಂದಿದೆ.

ಓಮನ್‌ನಲ್ಲಿ 9 ಮಂದಿ ಕೋವಿಡ್‌ಗೆ ಬಲಿಆಗಿದ್ದು, 576 ಮಂದಿ ಗೆ ಹೊಸದಾಗಿ ಸೋಂಕು ದೃಢಪಟ್ಟಿದೆ. ಕುವೈತ್‌ನಲ್ಲಿ 201 ಭಾರತೀಯರಿಗೆ ರೋಗ ತಗಲಿರುವುದು ದೃಢಪಟ್ಟಿದ್ದು, ಇದರೊಂದಿಗೆ ಆ ದೇಶದಲ್ಲಿ ಕೋವಿಡ್ ಬಾಧಿತ ಭಾರತೀಯರ ಸಂಖ್ಯೆ 8547ಕ್ಕೇರಿದೆ. ಕುವೈತ್‌ನಲ್ಲಿ ಕೊರೋನ ಸೋಂಕಿತರ ಒಟ್ಟು ಸಂಖ್ಯೆ ಈಗ 28649 ಆಗಿದ್ದು, ಮೃತರ ಸಂಖ್ಯೆ 226ಕ್ಕೆ ತಲುಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News