ಹಲವು ಭಾರತೀಯರು ಸೇರಿ 600 ಪೈಲಟ್‌ಗಳನ್ನು ಕೆಲಸದಿಂದ ತೆಗೆದುಹಾಕಿದ ಎಮಿರೇಟ್ಸ್

Update: 2020-06-09 16:08 GMT

ದುಬೈ, ಜೂ. 9: ದುಬೈಯ ಸರಕಾರಿ ಒಡೆತನದ ವಿಮಾನಯಾನ ಸಂಸ್ಥೆ ‘ಎಮಿರೇಟ್ಸ್’ 600 ಪೈಲಟ್‌ಗಳನ್ನು ಮಂಗಳವಾರ ಕೆಲಸದಿಂದ ತೆರವುಗೊಳಿಸಿದೆ. ಈ ಪೈಕಿ ಹಲವು ಭಾರತೀಯರೂ ಇದ್ದಾರೆ. ಇದು ವಾಯುಯಾನ ಉದ್ದಿಮೆಯ ಇತಿಹಾಸದಲ್ಲೇ ಅತಿ ದೊಡ್ಡ ಪ್ರಮಾಣದ ಉದ್ಯೋಗನಷ್ಟಗಳ ಪೈಕಿ ಒಂದಾಗಿದೆ.

ಇದರೊಂದಿಗೆ ಈ ವಿಮಾನಯಾನ ಸಂಸ್ಥೆಯು ಈವರೆಗೆ ಒಟ್ಟು 792 ಪೈಲಟ್‌ಗಳನ್ನು ಕೆಲಸದಿಂದ ತೆಗೆದಂತಾಗಿದೆ.

‘‘ನಮ್ಮ ಉದ್ದಿಮೆಯನ್ನು ಮುನ್ನಡೆಸಿಕೊಂಡು ಹೋಗುವುದಕ್ಕಾಗಿ ಲಭ್ಯವಿರುವ ಎಲ್ಲ ಸಂಭಾವ್ಯ ಸಾಧ್ಯತೆಗಳನ್ನು ನಾವು ಪರಿಶೀಲಿಸಿದ್ದೇವೆ. ಆದರೆ, ದುರದೃಷ್ಟವಶಾತ್ ನಮ್ಮೊಂದಿಗೆ ಕೆಲಸ ಮಾಡಿರುವ ಕೆಲವು ಅದ್ಭುತ ಜನರಿಗೆ ವಿದಾಯ ಕೋರಬೇಕಾದ ನಿರ್ಧಾರಕ್ಕೆ ನಾವು ಬರಬೇಕಾಯಿತು’’ ಎಂದು ಕಂಪೆನಿಯ ವಕ್ತಾರೆಯೊಬ್ಬರು ತಿಳಿಸಿದರು.

‘‘ಯಾವೆಲ್ಲ ರೀತಿಯಲ್ಲಿ ಕಂಪೆನಿಯ ಉದ್ಯೋಗಿಗಳನ್ನು ರಕ್ಷಿಸಲು ಸಾಧ್ಯವೋ, ಆ ಎಲ್ಲ ಕ್ರಮಗಳನ್ನು ನಾವು ತೆಗೆದುಕೊಂಡಿದ್ದೇವೆ’’ ಎಂದರು.

ಸರಕಾರಿ ಒಡೆತನದ ಎಮಿರೇಟ್ಸ್ ಏರ್‌ಲೈನ್ಸ್‌ನಲ್ಲಿ ಸುಮಾರು 60,000 ಉದ್ಯೋಗಿಗಳಿದ್ದಾರೆ. ಪೈಲಟ್‌ಗಳನ್ನು ಹೊರತುಪಡಿಸಿ, ಇತರ ಎಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗಿದೆ ಎನ್ನುವುದನ್ನು ಸಂಸ್ಥೆ ಹೇಳಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News