ಸಿಬ್ಬಂದಿಗೆ ಕೊರೋನ ಸೋಂಕು: ಸೌದಿಯಲ್ಲಿನ ಯೆಮನ್, ಫಿಲಿಪ್ಪೀನ್ಸ್ ದೂತವಾಸ ಕಚೇರಿಗೆ ಬೀಗ

Update: 2020-06-14 16:20 GMT

ರಿಯಾದ್,ಜೂ.14: ಸೌದಿ ಅರೇಬಿಯದ ರಾಜಧಾನಿ ರಿಯಾದ್‌ನಲ್ಲಿರುವ ಯೆಮನ್ ಹಾಗೂ ಫಿಲಿಫ್ಫೀನ್ಸ್‌ನ ದೂತಾವಾಸ ಕಚೇರಿಗಳು ಅನಿರ್ದಿಷ್ಟಾವಧಿಗೆ ಮುಚ್ಚುಗಡೆಗೊಂಡಿರುವುದಾಗಿ ತಿಳಿದುಬಂದಿದೆ. ಎರಡೂ ರಾಯಭಾರಿ ಕಚೇರಿಗಳ ಸಿಬ್ಬಂದಿಯಲ್ಲಿ ಕೊರೋನ ವೈರಸ್ ಸೋಂಕು ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆಯೆಂದು ತಿಳಿದುಬಂದಿದೆ.

   ಯೆಮೆನಿ ರಾಯಭಾರಿ ಕಚೇರಿಯನ್ನು ಶನಿವಾರ ಮುಚ್ಚುಗಡೆಗೊಳಿಸಲಾಗಿದೆ. ಆದರೆ ಎಷ್ಟು ಮಂದಿ ಉದ್ಯೋಗಿಗಳು ಕೊರೋನ ಸೋಂಕಿತರಾಗಿದ್ದರೆಂದು ಅದು ದೃಢಪಡಿಸಿಲ್ಲ. ರಿಯಾದ್‌ನಲ್ಲಿನ ಫಿಲಿಪ್ಫಿನ್ಸ್ ರಾಯಭಾರಿ ಕಚೇರಿ ಶನಿವಾರ ಹೇಳಿಕೆಯೊಂದನ್ನು ನೀಡಿ, ಆರು ಮಂದಿ ಉದ್ಯೋಗಿಗಳಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆ ಯಲ್ಲಿ ತನ್ನ ಕಾರ್ಮಿಕ ವ್ಯವಹಾರಗಳ ವಿಭಾಗವನ್ನು ಮುಚ್ಚುಗಡೆ ಗೊಳಿಸಿರುವುದಾಗಿ ತಿಳಿಸಿದೆ.

 ಕೊರೋನ ವೈರಸ್ ಸೋಂಕಿನ ಹರಡುವಿಕೆ ತಡೆಯಲು ಸೌದಿ ಅರೇಬಿಯ ಆರಂಭಿಕ ಹಂತದಲ್ಲೇ ತ್ವರಿತವಾಗಿ ಕ್ರಮಗಳನ್ನು ಕೈಗೊಂಡಿದ್ದರೂ ದೇಶದಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 1.23 ಲಕ್ಷವನ್ನು ದಾಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News