ಸೌದಿ ಅರೇಬಿಯದಾದ್ಯಂತ ರವಿವಾರ 6 ಗಂಟೆಯಿಂದ ಕರ್ಫ್ಯೂ ಹಿಂದೆಗೆತ

Update: 2020-06-20 16:00 GMT

ಹೊಸದಿಲ್ಲಿ: ಸೌದಿ ಅರೇಬಿಯಾದ ಎಲ್ಲಾ ಕಡೆಗಳಲ್ಲಿ ರವಿವಾರ ಬೆಳಗ್ಗೆ 6 ಗಂಟೆಯಿಂದ ಕರ್ಫ್ಯೂವನ್ನು ಸಂಪೂರ್ಣವಾಗಿ ಹಿಂದೆಗೆದುಕೊಳ್ಳಲಾಗುವುದು ಎಂದು ಸೌದಿಯ ಆಂತರಿಕ ಸಚಿವಾಲಯ ತಿಳಿಸಿದೆ ಎಂದು gulfnews.com ವರದಿ ಮಾಡಿದೆ.

ಆರೋಗ್ಯ ಅಧಿಕಾರಿಗಳ ಸೂಚನೆಗಳನ್ನು ಅನುಸರಿಸಿ ಸೌದಿಯಾದ್ಯಂತ ಪರಿಸ್ಥಿತಿಯನ್ನು ಸಾಮಾನ್ಯ ಸ್ಥಿತಿಗೆ ತರಲಾಗುವುದು ಮತ್ತು ಎಲ್ಲಾ ಆರ್ಥಿಕ ಹಾಗು ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಇದೇ ಸಂದರ್ಭ ಮುಂದಿನ ಆದೇಶದವರೆಗೆ ಉಮ್ರಾ, ವಿಸಿಟ್ ವೀಸಾಗಳು , ಅಂತಾರಾಷ್ಟ್ರೀಯ ವಿಮಾನಗಳನ್ನು ನಿರ್ಬಂಧಿಸಲಾಗಿದೆ.  ಕರ್ಫ್ಯೂ ಹಿಂದೆಗೆದ ನಂತರ ಎಲ್ಲಾ ಜನರು ಸುರಕ್ಷಿತ ಅಂತರವನ್ನು ಕಾಪಾಡಬೇಕು, ಮಾಸ್ಕ್ ಧರಿಸಬೇಕು ಮತ್ತು ಮೂಗು ಮತ್ತು ಬಾಯಿ ಮುಚ್ಚಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ಯಾವುದೇ ಸಭೆಗಳಲ್ಲಿ ಕಡ್ಡಾಯವಾಗಿ 50 ಜನರಿಗೆ ಮಾತ್ರ ಅವಕಾಶ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿಯಾಗಿದೆ.

ಎಲ್ಲರೂ Tawakkalna ಮತ್ತು  Tabaud ಆ್ಯಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು, ಆ ಮೂಲಕ ಆರೋಗ್ಯ ಸಂಬಂಧಿ ಮಾಹಿತಿಗಳನ್ನು ಪಡೆಯಬಹುದು ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News