ಐ.ಎಸ್.ಎಫ್ ಕರ್ನಾಟಕ, ಬ್ಲಡ್ ಡೋನರ್ಸ್ ಮಂಗಳೂರು ಸಹಯೋಗದಲ್ಲಿ ರಕ್ತದಾನ ಶಿಬಿರ

Update: 2020-06-21 17:20 GMT

ಸೌದಿ ಅರೇಬಿಯಾ, ಜೂ.21: ಐ.ಎಸ್.ಎಫ್ ಕರ್ನಾಟಕ, ಹಫರ್ ಅಲ್ ಬತೀನ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು (ರಿ) ಜಂಟಿ ಸಹಯೋಗದಲ್ಲಿ ಸೌದಿ ಅರೇಬಿಯಾದ ಹಫರ್ ಅಲ್ ಬತೀನ್ ನಲ್ಲಿ ರಕ್ತದಾನ ಶಿಬಿರ ನಡೆಯಿತು.

ಇಂಡಿಯನ್ ಸೋಷಿಯಲ್ ಫಾರಂ( ISF) ಕರ್ನಾಟಕ, ಹಫರ್ ಅಲ್ ಬತೀನ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಜಂಟಿ ಸಹಯೋಗದೊಂದಿಗೆ ಸೆಂಟ್ರಲ್ ಬ್ಲಡ್ ಬ್ಯಾಂಕ್ ಹಫರ್ ಅಲ್ ಬಾತಿನ್, ಸೌದಿ ಅರೇಬಿಯಾ ಇವರ ಸಹಭಾಗಿತ್ವದಲ್ಲಿ ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ 242 ನೇ ಬೃಹತ್ ರಕ್ತದಾನ ಶಿಬಿರವು ದಿನಾಂಕ ಶನಿವಾರ ಸೆಂಟ್ರಲ್ ಬ್ಲಡ್ ಬ್ಯಾಂಕ್ ಹಫರ್ ಅಲ್ ಬಾತಿನ್  ನಲ್ಲಿ ನಡೆಯಿತು.

ಶಿಬಿರದಲ್ಲಿ ಅನಿವಾಸಿ ಕನ್ನಡಿಗರ ಸಹಿತ ವಿವಿಧ ರಾಜ್ಯಗಳ 51 ರಕ್ತದಾನಿಗಳು ರಕ್ತದಾನ ಮಾಡಿದರು. ಕೋವಿಡ್ ವೇಳೆಯಲ್ಲೂ ಬಹಳ ಸುರಕ್ಷಿತವಾಗಿ ಹಮ್ಮಿಕೊಂಡ ಈ ರಕ್ತದಾನ ಶಿಬಿರವು ರಕ್ತನಿಧಿಗಳ ವೈದ್ಯಾಧಿಕಾರಿಗಳು ಹಾಗೂ ರಕ್ತದಾನಿಗಳ ಸಹಕಾರದಿಂದ ಬಹಳ ಯಶಸ್ವಿಯಾಗಿ ನೆರವೇರಿತು.

ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಇಂಡಿಯನ್ ಸೋಷಿಯಲ್ ಫಾರಂ ಜುಬೈಲ್ ಇದರ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ನಝೀರ್, ಸಕಲ ಸುರಕ್ಷಾ ಮಾರ್ಗಗಳನ್ನು ಅನುಸರಿಸಿಕೊಂಡು ಇಂತಹ ಸಂದಿಗ್ದ ಪರಿಸ್ಥಿತಿಯಲ್ಲೂ ಐ.ಎಸ್.ಎಫ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಾಮಾಜಿಕ ಚಿಂತನೆಯಲ್ಲಿ ತೊಡಗಿಸಿಕೊಂಡಿದೆ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು (ರಿ) ಕಾರ್ಯ ನಿರ್ವಾಹಕ ಇರ್ಷಾದ್ ಉಚ್ಚಿಲ, ಸೆಂಟ್ರಲ್ ಬ್ಲಡ್ ಬ್ಯಾಂಕ್ ಹಫರ್ ಅಲ್ ಬತೀನ್ ಇದರ ವೈದ್ಯಾಧಿಕಾರಿ ಡಾ.ವಿಜಯ್ ಗಾಯಲ್, ಇಂಡಿಯನ್ ಸೋಷಿಯಲ್ ಫೋರಂ ಇದರ ಸದಸ್ಯರಾದ ಅಶ್ರಫ್ ಕೂಳೂರು ಜುಬೈಲ್ ಹಾಗೂ ಶೇಖ್ ಅಡ್ಯಾರ್ ಜುಬೈಲ್ ಉಪಸ್ಥಿತರಿದ್ದರು. ಇಂಡಿಯನ್ ಸೋಷಿಯಲ್ ಫೋರಂ ಇದರ 15ಕ್ಕೂ ಹೆಚ್ಚು ಕಾರ್ಯಕರ್ತರು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದರು.

ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ದೇಶ ವಿದೇಶದಲ್ಲಿನ ಸೇವೆ ಹಾಗೂ ಶಿಬಿರದ ಯಶಸ್ವಿಯ ಫಲವಾಗಿ ಸೆಂಟ್ರಲ್ ಬ್ಲಡ್ ಬ್ಯಾಂಕ್ ಆಡಳಿತ ಮಂಡಳಿಯು ಬಿಡಿಎಂ ಸಂಸ್ಥೆಯ ಕಾರ್ಯನಿರ್ವಾಹಕರಾದ ಇರ್ಷಾದ್ ಉಚ್ಚಿಲ ಅವರಿಗೆ ಕಿರುಕಾಣಿಯನ್ನು ಹಸ್ತಾಂತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News