ಕೋವಿಡ್-19 ಎಫೆಕ್ಟ್: ಈ ಬಾರಿ ಸೀಮಿತ ಹಜ್‍ಗೆ ಅನುಮತಿಸಿದ ಸೌದಿ ಅರೇಬಿಯಾ

Update: 2020-06-23 14:44 GMT
ಸಾಂದರ್ಭಿಕ ಚಿತ್ರ

ರಿಯಾದ್, ಜೂ.23: ವಿಶ್ವದಾದ್ಯಂತ ಕೊರೋನ ವೈರಸ್ ಸೋಂಕಿನ ಹಾವಳಿ ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ, ಈ ವರ್ಷದ ಪವಿತ್ರ ಹಜ್ ಯಾತ್ರೆಯಲ್ಲಿ ಅತ್ಯಂತ ಸೀಮಿತ ಸಂಖ್ಯೆಯ ಯಾತ್ರಿಕರಿಗೆ ಅವಕಾಶ ನೀಡಲು ನಿರ್ಧರಿಸಿರುವುದಾಗಿ ಸೌದಿ ಆರೇಬಿಯ ಸೋಮವಾರ ಪ್ರಕಟಿಸಿದೆ. ಆದಾಗ್ಯೂ, ಹಜ್ ಯಾತ್ರೆಗಾಗಿ ಈಗಾಗಲೇ ಸೌದಿ ಆರೇಬಿಯಕ್ಕೆ ಆಗಮಿಸಿರುವ ಯಾತ್ರಿಕರಿಗೆ ವಾರ್ಷಿಕ ಹಜ್‌ವಿಧಿಗಳನ್ನು ನಿರ್ವಹಿಸಲು ಅವಕಾಶ ನೀಡುವುದಾಗಿ ಅದು ತಿಳಿಸಿದೆ.

 ಸಾಮಾನ್ಯವಾಗಿ ಹಜ್ ಯಾತ್ರೆಗೆ ಪ್ರತಿ ವರ್ಷವೂ ಸರಾಸರಿ 20.50 ಲಕ್ಷ ಯಾತ್ರಿಕರು ಆಗಮಿಸುತ್ತಾರೆ. ಆದರೆ ಕೊರೋನಾ ವೈರಸ್ ವ್ಯಾಪಕವಾಗಿ ್ತರುವ ಹಿನ್ನೆಲೆಯಲ್ಲಿ ಹೊರದೇಶಗಳ ಯಾತ್ರಾರ್ಥಿಗಳಿಗೆ, ಹಜ್‌ಯಾತ್ರೆಗೆ ಅವಕಾಶ ನೀ ದಿರುವ ಅನಿವಾರ್ಯ ಕ್ರಮವನ್ನು ಅದು ಕೈಗೊಂಡಿದೆ.

ಈಗಾಗಲೇ ಸೌದಿ ಆರೇಬಿಯಕ್ಕೆ ಹಜ್‌ಯಾತ್ರೆಗೆಂದು ಆಗಮಿಸಿರುವ ವಿವಿಧ ದೇಶಗಳ ಮುಸ್ಲಿಮರಿಗೆ ಹಜ್‌ಯಾತ್ರೆಗೆ ಅವಕಾಶ ನೀಡಲಾಗುವುದೆಂದು ಹಜ್ ಸಚಿವಾಲಯ ಹೇಳಿದೆ. ಆದರೆ ಯಾತ್ರಿಕರ ಸಂಖ್ಯೆಯನ್ನು ಅದು ಬಹಿರಂಗಪಡಿಸಿಲ್ಲ.

‘‘ಈ ವರ್ಷ ಸೌದಿ ಆರೇಬಿಯದಲ್ಲಿನ ವಿವಿಧ ದೇಶಗಳ ಪ್ರಜೆಗಳು ಸೇರಿದಂತೆ ಅತ್ಯಂತ ಸೀಮಿತ ಸಂಖ್ಯೆಯ ಹಜ್‌ಯಾತ್ರಿಕರೊಂದಿಗೆ ಹಜ್ ಯಾತ್ರೆ ನಿರ್ವಹಿಸಲು ನಿರ್ಧರಿಸಲಾಗಿದೆ’’ ಎಂದು ಸೌದಿ ಆರೇಬಿಯದ ಅಧಿಕೃತ ಸುದ್ದಿಸಂಸ್ಥೆ ‘ಸೌದಿ ಪ್ರೆಸ್ ಏಜೆನ್ಸಿ’ ತಿಳಿಸಿದೆ.

‘‘ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಅತ್ಯಂತ ಸುರಕ್ಷಿತವಾದ ರೀತಿಯಲ್ಲಿ ಇಸ್ಲಾಮಿನ ಬೋಧನೆಗಳಿಗೆ ಅನುಗುಣವಾಗಿ ಹಜ್ ವಿಧಿಗಳನ್ನು ನಿರ್ವಹಿಸಲಾಗುವುದು’’ ಎಂದು ಅದು ಹೇಳಿದೆ.

ಸೌದಿ ಆರೇಬಿಯದಲ್ಲಿ ಕೋವಿಡ್-19 ಹಾವಳಿ ವ್ಯಾಪಕವಾಗಿದ್ದು, ಈಗಾಗಲೇ ಆ ದೇಶದಲ್ಲಿ ಸೋಂಕಿತರ ಸಂಖ್ಯೆ 1.61 ಲಕ್ಷ ದಾಟಿದ್ದು, ಇದು ಗಲ್ಫ್ ಪ್ರದೇಶದ ರಾಷ್ಟ್ರಗಳಲ್ಲೇ ಅತ್ಯಧಿಕವಾಗಿದೆ. ಈಗಾಗಲೇ ಸೌದಿಯಲ್ಲಿ 1300 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಸೌದಿ: ರಾತ್ರಿ ಕರ್ಫ್ಯೂ ತೆರವು

ಕೋವಿಡ್-19 ಪಿಡುಗು ಉಲ್ಬಣಗೊಂಡಿರುವ ಹೊರತಾಗಿಯೂ ಸೌದಿ ಆರೇಬಿಯವು ರವಿವಾರದಿಂದ ರಾತ್ರಿಕಾಲದ ಕರ್ಫ್ಯೂ ಅನ್ನು ರದ್ದುಪಡಿಸಿದೆ ಹಾಗೂ ಚಿತ್ರಮಂದಿರಗಳು, ಮನರಂಜನಾ ಸ್ಥಳಗಳಿಗೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಕೂಡಾ ತೆರವುಗೊಳಿಸಿದೆ.

‘‘ಸೀಮಿತ ಸಂಖ್ಯೆಯ ವಿದೇಶಿ ಯಾತ್ರಿಕರಿಗೆ ಹಜ್ ಯಾತೆಗೆ ಅವಕಾಶ ನೀಡುವ ಸೌದಿ ಆಡಳಿತ ನಿರ್ಧಾರವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸೌದಿ ಆಡಳಿತವು ಹಜ್ ಯಾತ್ರೆಗೆ ಅವಕಾಶ ನೀಡುವ ಯಾತ್ರಿಕರ ನಿಖರ ಸಂಖ್ಯೆಯೆಷ್ಟು?. ಯಾತ್ರಿಕರ ಆಯ್ಕೆಗೆ ಇರುವ ಮಾನದಂಡವೇನು?. ಒಟ್ಟು ಯಾತ್ರಿಕರ ಪೈಕಿ ಎಷ್ಟು ಮಂದಿ ಸೌದಿ ಪ್ರಜೆಗಳು ಹಾಗೂ ಎಷ್ಟು ಮಂದಿ ವಿದೇಶಿ ಪ್ರಜೆಗಳು ಇರುವರು ?. ಈ ಎಲ್ಲಾ ಪ್ರಶ್ನೆಗಳಿಗೆ ಸೌದಿ ಆರೇಬಿಯ ಉತ್ತರಿಸಬೇಕಾಗಿದೆ’’ ಎಂದು ಲಂಡನ್‌ನ ರಾಯಲ್ ಯುನೈಟೆಡ್ ಸರ್ವಿಸಸ್ ಇನ್ಸ್‌ಟಿಟ್ಯೂಟ್‌ನ ಸಂದರ್ಶಕ ಪ್ರೊಫೆಸ್ ಉಮರ್ ಕರೀಂ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News