3 ತಿಂಗಳ ಕಾಲ ಅನಿವಾಸಿಗಳ ವೀಸಾ ಅವಧಿ ವಿಸ್ತರಿಸಿದ ಸೌದಿ ಅರೇಬಿಯಾ

Update: 2020-07-05 16:40 GMT

ದುಬೈ,ಜು.5: ವಿದೇಶಗಳಲ್ಲಿಯ (ತಮ್ಮ ರಾಷ್ಟ್ರಗಳಿಗೆ ಮರಳಿರುವ) ವಲಸಿಗರಿಗೆ ಎಕ್ಸಿಟ್-ರಿಟರ್ನ್ ಮತ್ತು ವಿಸಿಟ್ ವೀಸಾಗಳ ಅವಧಿಯನ್ನು ಉಚಿತವಾಗಿ ಮೂರು ತಿಂಗಳ ಅವಧಿಗೆ ವಿಸ್ತರಿಸಲಾಗುವುದು ಎಂದು ಸೌದಿ ಅರೇಬಿಯ ಪ್ರಕಟಿಸಿದೆ.

 ವಿದೇಶಗಳಲ್ಲಿರುವ ವಲಸಿಗ ಉದ್ಯೋಗಿಗಳ ನಿರ್ಗಮನ ಮತ್ತು ವಾಪಸಾತಿ ವೀಸಾಗಳ ಅವಧಿಯನ್ನು ಮೂರು ತಿಂಗಳವರೆಗೆ ವಿಸ್ತರಿಸುವಂತೆ ಮತ್ತು ಈ ಸೌಲಭ್ಯವನ್ನು ಉಚಿತವಾಗಿ ಒದಗಿಸುವಂತೆ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಗಳನ್ನು ನೀಡಿದ್ದಾರೆ.

ಸರಕಾರದ ಆದೇಶದಂತೆ ಕೊರೋನ ವೈರಸ್ ಪಿಡುಗಿನಿಂದಾಗಿ ಅಂತರರಾಷ್ಟ್ರೀಯ ವಿಮಾನಯಾನ ಸೇವೆಗಳು ಸ್ಥಗಿತಗೊಳ್ಳುವುದಕ್ಕೆ ಮುನ್ನ ಸೌದಿ ಅರೇಬಿಯವನ್ನು ಪ್ರವೇಶಿಸಿದ್ದ ವಿದೇಶಿಯರ ವೀಸಾ ಅವಧಿಯನ್ನು ಇನ್ನೂ ಮೂರು ತಿಂಗಳು ವಿಸ್ತರಿಸಲಾಗುವುದು. ಅಲ್ಲದೆ ಫೈನಲ್ ಎಕ್ಸಿಟ್ ವೀಸಾಗಳನ್ನು ಹೊಂದಿರುವ ವಲಸಿಗರ ವೀಸಾ ಅವಧಿಯೂ ಮೂರು ತಿಂಗಳು ವಿಸ್ತರಣೆಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News