ಸೌದಿ ಅರೇಬಿಯಾ: 2 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

Update: 2020-07-05 15:29 GMT
ಸಾಂದರ್ಭಿಕ ಚಿತ್ರ

ದುಬೈ,ಜು.15: ಸೌದಿ ಅರೇಬಿಯದಲ್ಲಿ ಕೊರೋನ ವೈರಸ್ ಆರ್ಭಟ  ಮುಂದುವರಿದಿದ್ದು, ಅಲ್ಲಿ ರವಿವಾರ ಸೋಂಕಿತರ ಒಟ್ಟು ಸಂಖ್ಯೆ 2 ಲಕ್ಷವನ್ನು ದಾಟಿದೆ. ಇತ್ತ ಯುಎಇನಲ್ಲಿಯೂ ಇಂದು ಸೋಂಕಿನ ಪ್ರಕರಣಗಳ ಸಂಖ್ಯೆ 50 ಸಾವಿರಕ್ಕೇರಿದೆ.

ಅರಬ್ ಜಗತ್ತಿನ ಎರಡು ಪ್ರಬಲ ಆರ್ಥಿಕತೆಯ ಈ ಎರಡು ದೇಶಗಳು ಕಳೆದ ತಿಂಗಳು ಕರ್ಫ್ಯೂವನ್ನು ಸಂಪೂರ್ಣವಾಗಿ ರದ್ದುಪಡಿಸಿದ ಬಳಿಕ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಜಿಗಿತವುಂಟಾಗಿದೆ.

ಸೌದಿ ಹಾಗೂ ಯುಎಇ ಮಾರ್ಚ್ ತಿಂಗಳ ಮಧ್ಯದಲ್ಲಿ ಹೇರಲಾಗಿದ್ದ ಲಾಕ್‌ಡೌನ್ ಅನ್ನು ಕಳೆದ ತಿಂಗಳಿನಿಂದ ಹಂತಹಂತವಾಗಿ ಸಡಿಲುಗೊಳಿಸುತ್ತಾ ಬಂದಿದ್ದು, ವಾಣಿಜ್ಯ ವ್ಯವಹಾರಗಳಿಗೆ ಅನುಮತಿ ನೀಡಿದೆ ಹಾಗೂ ಸಾರ್ವಜನಿಕ ಸ್ಥಳಗಳನ್ನು ತೆರೆದಿಟ್ಟಿದೆ.

 ಇತರ ಗಲ್ಫ್ ದೇಶಗಳು ಕೂಡಾ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲುಗೊಳಿಸುವತ್ತ ಹೆಜ್ಜೆಯಿಟ್ಟಿವೆ. ಕುವೈತ್‌ ನಲ್ಲಿ ಭಾಗಶಃ ಕರ್ಫ್ಯೂ ಇನ್ನೂ ಜಾರಿಯಲ್ಲಿದ್ದರೆ, ಕತರ್, ಬಹರೈನ್ ಹಾಗೂ ಒಮನ್ ಈವರೆಗೆ ಲಾಕ್‌ಡೌನ್ ಹೇರಿಕೆ ಮಾಡಿಲ್ಲ.

ಆರು ಗಲ್ಫ್ ದೇಶಗಳ ಪೈಕಿ ಸೌದಿಯಲ್ಲಿ ಅತ್ಯಧಿಕ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಆ ದೇಶದಲ್ಲಿ ಶುಕ್ರವಾರ 4100 ಪ್ರಕರಣಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 2,05,929 ಲಕ್ಷವನ್ನು ದಾಟಿದೆ ಹಾಗೂ ಈತನಕ 1,858 ಮಂದಿ ಈ ಭೀಕರ ಸೋಂಕಿಗೆ ಬಲಿಯಾಗಿದ್ದಾರೆ. ಆದಾಗ್ಯೂ, ಜೂನ್ ತಿಂಗಳ ಮಧ್ಯದವರೆಗೆ ಸೌದಿಯಲ್ಲಿ ದೈನಂದಿನ ಕೋವಿಡ್-19 ಸೋಂಕಿನ ಪ್ರಕರಣಗಳ ಸಂಖ್ಯೆ 4 ಸಾವಿರವನ್ನು ದಾಟುತ್ತಿದ್ದಾದರೂ, ಇದೀಗ ಇಳಿಮುಖವಾಗ ತೊಡಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News