ದೇಶಿ ಹಜ್ ಯಾತ್ರಿಗಳಿಗೆ ಆರೋಗ್ಯ ಉಪಕ್ರಮಗಳನ್ನು ಘೋಷಿಸಿದ ಸೌದಿ

Update: 2020-07-06 16:30 GMT

ರಿಯಾದ್ (ಸೌದಿ ಅರೇಬಿಯ), ಜು. 6: 2020ರ ಹಜ್ ಋತುವಿನ ವೇಳೆ, ನೂತನ-ಕೊರೋನ ವೈರಸ್ ಕಾಯಿಲೆಯ ಹರಡುವಿಕೆಯನ್ನು ತಡೆಯಲು ತೆಗೆದುಕೊಳ್ಳಬೇಕಾಗಿರುವ ಆರೋಗ್ಯ ಉಪಕ್ರಮಗಳನ್ನು ಸೌದಿ ಅರೇಬಿಯ ಪ್ರಕಟಿಸಿದೆ ಎಂದು ಸರಕಾರಿ ಸುದ್ದಿ ಸಂಸ್ಥೆ ಸೌದಿ ಪ್ರೆಸ್ ಏಜನ್ಸಿ (ಎಸ್ಪಿಎ) ಸೋಮವಾರ ವರದಿ ಮಾಡಿದೆ.

ಕೊರೋನ ವೈರಸ್ ಹರಡುವಿಕೆಯನ್ನು ತಡೆಯುವುದಕ್ಕಾಗಿ, ಈ ಬಾರಿಯ ಹಜ್ ಯಾತ್ರೆಯಲ್ಲಿ ಭಾಗವಹಿಸಲು ದೇಶದ ಕೇವಲ 1,000 ಮಂದಿಗೆ ಅವಕಾಶ ನೀಡಲು ಸೌದಿ ಅರೇಬಿಯವು ಜೂನ್ ನಲ್ಲಿ ನಿರ್ಧರಿಸಿತ್ತು. ಆಧುನಿಕ ಕಾಲದ ಇತಿಹಾಸದಲ್ಲಿ ಮೊದಲ ಬಾರಿಗೆ ವಿದೇಶಿ ಹಜ್ ಯಾತ್ರಿಗಳ ಭಾಗವಹಿಸುವಿಕೆಯನ್ನು ನಿಷೇಧಿಸಿತ್ತು.

ಈ ಬಾರಿಯ ಹಜ್ ಯಾತ್ರೆಯಲ್ಲಿ ಕಾಬಾವನ್ನು ಸ್ಪರ್ಶಿಸುವುದನ್ನು ನಿಷೇಧಿಸಲಾಗಿದೆ ಹಾಗೂ ಸಾಮೂಹಿಕ ಪ್ರಾರ್ಥನೆಯ ವೇಳೆ ಮತ್ತು ಕಾಬಾಕ್ಕೆ ಸುತ್ತುಬರುವ ಪ್ರದೇಶದಲ್ಲಿ ಪ್ರತಿ ಯಾತ್ರಿಕನು ಇತರ ಯಾತ್ರಿಕರಿಗಿಂತ ಒಂದೂವರೆ ಮೀಟರ್ ಅಂತರವನ್ನು ಕಾಪಾಡಿಕೊಳ್ಳಬೇಕಾಗಿದೆ.

ಈ ವಿಷಯವನ್ನು ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಶನ್ ಆ್ಯಂಡ್ ಕಂಟ್ರೋಲ್ (ಸಿಡಿಸಿ) ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News