ಸೌದಿ ಅರೇಬಿಯ ದೊರೆ ಸಲ್ಮಾನ್ ಆಸ್ಪತ್ರೆಗೆ ದಾಖಲು

Update: 2020-07-20 16:12 GMT

ರಿಯಾದ್ (ಸೌದಿ ಅರೇಬಿಯ), ಜು. 20: ಪಿತ್ತಕೋಶದ ಊತದಿಂದ ಬಳಲುತ್ತಿರುವ ಸೌದಿ ಅರೇಬಿಯದ ದೊರೆ ಸಲ್ಮಾನ್ ಬಿನ್ ಅಬ್ದುಲಝೀಝ್‌ರನ್ನು ರಾಜಧಾನಿ ರಿಯಾದ್‌ನಲ್ಲಿರುವ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದೆ ಎಂದು ಸರಕಾರಿ ಸುದ್ದಿಸಂಸ್ಥೆ ಎಸ್‌ಪಿಎ ಸೋಮವಾರ ವರದಿ ಮಾಡಿದೆ.

2015ರಿಂದ ಜಗತ್ತಿನ ಅತಿ ದೊಡ್ಡ ತೈಲ ರಫ್ತು ದೇಶವನ್ನು ಆಳುತ್ತಿರುವ 84 ವರ್ಷದ ದೊರೆ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದಾರೆ ಎಂದು ಅದು ಸುದ್ದಿಸಂಸ್ಥೆ ತಿಳಿಸಿದೆ. ಆದರೆ, ಹೆಚ್ಚಿನ ವಿವರಗಳನ್ನು ನೀಡಿಲ್ಲ.

ಈ ಸುದ್ದಿಯ ಬಳಿಕ, ಸೌದಿ ಅರೇಬಿಯದ ತನ್ನ ಭೇಟಿಯನ್ನು ಇರಾಕ್ ಪ್ರಧಾನಿ ಮುಸ್ತಾಫ ಅಲ್-ಕದೀಮಿ ಮುಂದೂಡಿದ್ದಾರೆ ಎಂದು ಸೌದಿ ಅರೇಬಿಯದ ವಿದೇಶ ಸಚಿವ ರಾಜಕುಮಾರ ಫೈಸಲ್ ಬಿನ್ ಫರ್ಹಾನ್ ಅಲ್ ಸೌದ್ ತಿಳಿಸಿದ್ದಾರೆ.

ಇಸ್ಲಾಮ್‌ನ ಪವಿತ್ರ ಸ್ಥಳಗಳ ಉಸ್ತುವಾರಿ ಹೊತ್ತಿರುವ ದೊರೆ ಸಲ್ಮಾನ್, ದೊರೆಯಾಗುವ ಮೊದಲು 2012ರಿಂದ ಎರಡೂವರೆ ವರ್ಷಗಳಿಗೂ ಹೆಚ್ಚು ಕಾಲ ಸೌದಿ ಯುವರಾಜ ಮತ್ತು ಉಪಪ್ರಧಾನಿಯಾಗಿದ್ದರು. ಅವರು 50 ವರ್ಷಗಳಿಗೂ ಹೆಚ್ಚು ಅವಧಿಗೆ ರಿಯಾದ್ ವಲಯದ ಗವರ್ನರ್ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News