ಮಾಸ್ಕ್ ಧರಿಸದಿದ್ದರೆ 3,000 ದಿರ್ಹಮ್ ದಂಡ: ಅಬುಧಾಬಿ ಪೊಲೀಸರ ಎಚ್ಚರಿಕೆ

Update: 2020-07-27 15:45 GMT

ಅಬುಧಾಬಿ (ಯುಎಇ), ಜು. 27: ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಜನಜಂಗುಳಿ ಪ್ರದೇಶಗಳಲ್ಲಿ ಜನರು ಮುಖಗವಸು ಧರಿಸದೆ ಓಡಾಡುವುದು ಪತ್ತೆಯಾದರೆ ಅವರಿಗೆ ತಕ್ಷಣ 3,000 ದಿರ್ಹಮ್ (ಸುಮಾರು 61,050 ರೂಪಾಯಿ) ದಂಡ ವಿಧಿಸಲಾಗುವುದು ಎಂದು ಅಬುಧಾಬಿ ಪೊಲೀಸರು ಇನ್ನೊಮ್ಮೆ ಎಚ್ಚರಿಕೆ ಕೊಟ್ಟಿದ್ದಾರೆ.

ಕೋವಿಡ್-19ರ ಹರಡುವಿಕೆಯನ್ನು ತಡೆಯಲು ಮುಖಗವಸುಗಳನ್ನು ಧರಿಸುವುದು ಮತ್ತು ಸುರಕ್ಷಿತ ಅಂತರ ಕಾಪಾಡಿಕೊಳ್ಳುವುದು ಈಗಲೂ ಅಗತ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮುಖಗವಸುಗಳು ಬಾಯಿ ಮತ್ತು ಮೂಗು ಎರಡನ್ನೂ ಆವರಿಸಬೇಕು ಹಾಗೂ ಅದಕ್ಕೆ ಯಾವುದೇ ರಿಯಾಯಿತಿಗಳು ಇರುವುದಿಲ್ಲ ಹಾಗೂ ನೆಪಗಳು ನಡೆಯುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಕೋವಿಡ್-19 ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸುವವರ ವಿರುದ್ಧ 3,000 ದಿರ್ಹಮ್ ದಂಡ ವಿಧಿಸುವ ಆದೇಶವನ್ನು ಯುಎಇ ಸರಕಾರ ಮೇ ತಿಂಗಳಲ್ಲೇ ಜಾರಿಗೆ ತಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News