ದುಬೈ: ಆಗಸ್ಟ್ 1ರಿಂದ ರಜಾ ದಿನಗಳಲ್ಲೂ ತೆರೆದಿರುವ ಭಾರತೀಯ ಕೌನ್ಸುಲೇಟ್ ಕಚೇರಿ

Update: 2020-07-27 17:56 GMT

ದುಬೈ (ಯುಎಇ), ಜು. 27: ತುರ್ತು ಸೇವೆಗಳಿಗಾಗಿ ದುಬೈಯಲ್ಲಿರುವ ಭಾರತೀಯ ಕೌನ್ಸುಲೇಟ್ ಕಚೇರಿಯು ವಾರಾಂತ್ಯಗಳು ಸೇರಿದಂತೆ ಎಲ್ಲ ರಜಾ ದಿನಗಳಲ್ಲಿ ತೆರೆದಿರುತ್ತದೆ ಎಂದು ಕೌನ್ಸುಲೇಟ್ ಕಚೇರಿಯು ಸೋಮವಾರ ಪ್ರಕಟಿಸಿದೆ. ಪಾಸ್‌ಪೋರ್ಟ್‌ಗಳು, ತುರ್ತು ಪ್ರಮಾಣಪತ್ರಗಳು ಮತ್ತು ವೀಸಾಗಳು ಮುಂತಾದ ಪ್ರಯಾಣ ದಾಖಲೆಗಳು, ಕಾರ್ಮಿಕ ಸೇವೆಗಳು ಹಾಗೂ ಇನ್ನಿತರ ತುರ್ತು ಅವಶ್ಯಕತೆಗಳಿಗೆ ಸಂಬಂಧಿಸಿದ ಸೇವೆಗಳನ್ನು ಮಾತ್ರ ರಜಾದಿನಗಳಂದು ನೀಡಲಾಗುವುದು.

ಯಾವ ತುರ್ತು ಸೇವೆಗಳು ಲಭಿಸುವುದು ಹಾಗೂ ಆ ಸೇವೆಗಳಿಗೆ ಯಾವ ಪೂರಕ ದಾಖಲೆಗಳನ್ನು ತರಬೇಕು ಎನ್ನುವುದನ್ನು ತಿಳಿದುಕೊಳ್ಳಲು ಸಂದರ್ಶಕರು ಕೌನ್ಸುಲೇಟ್ ಕಚೇರಿಯ 247 ಸಹಾಯವಾಣಿ ಫೋನ್ ಸಂಖ್ಯೆಗಳಿಗೆ ಕರೆ ಮಾಡುವಂತೆ ಕಚೇರಿಯು ಮನವಿ ಮಾಡಿದೆ.

‘‘ಆಗಸ್ಟ್ 1ರಿಂದ ಡಿಸೆಂಬರ್ 31ರವರೆಗೆ ಶುಕ್ರವಾರ ಮತ್ತು ಶನಿವಾರ ಸೇರಿದಂತೆ ಎಲ್ಲ ರಜಾ ದಿನಗಳಲ್ಲಿ ಕೌನ್ಸುಲೇಟ್ ಕಚೇರಿಯು ಬೆಳಗ್ಗೆ 8ರಿಂದ 10ರವರೆಗೆ ತುರ್ತು ಸೇವೆಗಳಿಗಾಗಿ ತೆರದಿರುವುದು’’ ಎಂದು ಕಚೇರಿಯು ಸೋಮವಾರ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News