ಭಾರತೀಯರು ವಿಸಿಟ್ ವೀಸಾದಲ್ಲಿ ಶೀಘ್ರವೇ ಯುಎಇಗೆ ಪ್ರಯಾಣಿಸಬಹುದು

Update: 2020-08-09 15:04 GMT

ದುಬೈ (ಯುಎಇ), ಆ. 9: ಭಾರತ ಮತ್ತು ಯುಎಇ ದೇಶಗಳ ನಡುವೆ ಈಗ ಅಂತಿಮಗೊಳ್ಳುತ್ತಿರುವ ‘ಏರ್ ಬಬಲ್’ ಒಪ್ಪಂದದ ಆಧಾರದಲ್ಲಿ, ಯುಎಇಯ ಸಂದರ್ಶನ (ವಿಸಿಟ್) ವೀಸಾಗಳನ್ನು ಹೊಂದಿರುವ ಭಾರತೀಯರು ಶೀಘ್ರದಲ್ಲೇ ಯುಎಇಗೆ ಪ್ರಯಾಣಿಸಬಹುದು ಎಂದು ಯುಎಇಗೆ ಭಾರತೀಯ ರಾಯಭಾರಿ ಪವನ್ ಕಪೂರ್ ಹೇಳಿದ್ದಾರೆ.

ಕೆಲವು ದೇಶಗಳ ಮೇಲೆ ವಿಧಿಸಲಾಗಿರುವ ವೀಸಾ ಮತ್ತು ಪ್ರಯಾಣ ಸಂಬಂಧಿ ನಿರ್ಬಂಧಗಳನ್ನು ಸಡಿಲಿಸಲು ಭಾರತೀಯ ಗೃಹ ವ್ಯವಹಾರಗಳ ಸಚಿವಾಲಯ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ನಿರ್ಬಂಧಗಳ ಸಡಿಲಿಕೆಯ ಲಾಭ ಪಡೆಯುವ ದೇಶಗಳ ಪಟ್ಟಿಗೆ ಯುಎಇಯನ್ನು ಶೀಘ್ರವೇ ಸೇರಿಸಲಾಗುವುದು.

‘‘ಇದಕ್ಕೆ ಸಂಬಂಧಿಸಿದ ನಿರ್ಧಾರವೊಂದನ್ನು ಭಾರತದಲ್ಲಿ ಗೃಹ ವ್ಯವಹಾರಗಳ ಸಚಿವಾಲಯ ತೆಗೆದುಕೊಂಡಿದೆ ಎಂದು ನನಗೆ ತಿಳಿದುಬಂದಿದೆ. ಈ ನಿರ್ಧಾರವು ಇನ್ನೆರಡು ದಿನಗಳಲ್ಲಿ ನಾಗರಿಕ ವ್ಯವಹಾರಗಳ ಸಚಿವಾಲಯವು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ ಬಳಿಕವಷ್ಟೇ ಈ ನಿರ್ಧಾರವು ಜಾರಿಗೆ ಬರುತ್ತದೆ’’ ಎಂದು ಭಾರತೀಯ ರಾಯಭಾರಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News