ದುಬೈ: ಶಿರೂರಿನ ದಾನಿಯಾ ಹಸನ್‌ಗೆ ಪ್ರತಿಷ್ಠಿತ ಶೇಕ್ ಫಾತಿಮಾ ಬಿಂತ್ ಮುಬಾರಕ್ ಅವಾರ್ಡ್

Update: 2020-08-15 08:50 GMT

ದುಬೈ, ಆ.15 : ಉಡುಪಿಯ ಶಿರೂರಿನ ಡಾ. ಸಯ್ಯದ್ ಹಸನ್‌ ಅವರ ಪುತ್ರಿ ದಾನಿಯಾ ಹಸನ್ 2020 ರ ಸಾಲಿನಲ್ಲಿ ಅತ್ಯುತ್ತಮ ಶೈಕ್ಷಣಿಕ ನಿರ್ವಹಣೆಗೆ ಪ್ರತಿಷ್ಠಿತ ಶೇಕ್ ಫಾತಿಮಾ ಬಿಂತ್ ಮುಬಾರಕ್ ಅವಾರ್ಡ್‌ಗೆ ಪಾತ್ರರಾಗಿದ್ದಾರೆ. ಈ ಗೌರವಕ್ಕೆ ಪಾತ್ರರಾಗಿರುವ ಈ ಭಾಗದ ಏಕೈಕ ವಿದ್ಯಾರ್ಥಿನಿಯಾಗಿದ್ದಾರೆ.

ಯುಎಇಯಲ್ಲಿ ನೆಲೆಸಿರುವ ಯಾವುದೇ ದೇಶದ ಅತ್ಯುತ್ತಮ ಶೈಕ್ಷಣಿಕ ನಿರ್ವಹಣೆ ತೋರಿದ ವಿದ್ಯಾರ್ಥಿನಿಯರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗುತ್ತದೆ.
ಈ ಪ್ರಶಸ್ತಿಯು ಟ್ರೋಫಿ ಹಾಗೂ ಪ್ರಮಾಣ ಪತ್ರವಲ್ಲದೆ ವಿದ್ಯಾರ್ಥಿಗಳಿಗೆ ಪ್ರಶಂಸೆ ಹಾಗೂ ಪ್ರೋತ್ಸಾಹ ನೀಡಲು ಶೈಕ್ಷಣಿಕ ವರ್ಷದ ಎಲ್ಲಾ ಖರ್ಚನ್ನು ಭರಿಸುತ್ತದೆ.

ದಾನಿಯಾ ಪ್ರಸ್ತುತ ಫುಜೈರಾದ ಜಿಇಎಮ್‌ಎಸ್ ವಿನ್‌ಚೆಸ್ಟರ್ ಶಾಲೆಯಲ್ಲಿ 10ನೇ ತರಗತಿಯಲ್ಲಿ ಅಭ್ಯಸಿಸುತ್ತಿದ್ದಾರೆ.

ಆಕೆಯ ತಂದೆ ಡಾ. ಸಯ್ಯದ್ ಹಸನ್ ಉಡುಪಿ ಜಿಲ್ಲೆಯ ಶಿರೂರಿನವರು. ಪ್ರಸ್ತುತ ಅವರು ಯುಎಇಯ ಕೋರ್ಫ್‌ಕನ್‌ನಲ್ಲಿ ನೆಲೆಸಿದ್ದಾರೆ ಹಾಗೂ ಶಿರೂರಿನ ಗ್ರೀನ್ ವ್ಯಾಲಿ ಶಾಲೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News