ಹುದಿ ಬಂಡುಕೋರರ ಕ್ಷಿಪಣಿ ಹೊಡೆದುರುಳಿಸಿದ ಸೌದಿ

Update: 2020-08-16 18:06 GMT
ಫೈಲ್ ಫೋಟೊ

ದುಬೈ, ಆ.15: ದಕ್ಷಿಣ ಸೌದಿ ಅರೇಬಿಯದ ನಾಗರಿಕ ನೆಲೆಗಳ ಮೇಲೆ ಇರಾನ್ ಬೆಂಬಲಿತ ಹುದಿ ಬಂಡುಕೋರರು ಉಡಾಯಿಸಿದ್ದ ಪ್ರಕ್ಷೇಪಕ ಕ್ಷಿಪಣಿಯನ್ನು ಹೊಡೆದುರುಳಿಸಿರುವುದಾಗಿ ಯೆಮನ್‌ನಲ್ಲ್ಲಿ ಬಂಡುಕೋರರ ವಿರುದ್ಧ ಹೋರಾಡುತ್ತಿರುವ ಸೌದಿ ನೇತೃತ್ವದ ಮೈತ್ರಿ ಪಡೆ ರವಿವಾರ ತಿಳಿಸಿದೆ.

ಕೊರೋನ ವೈರಸ್ ಸಾಂಕ್ರಾಮಿಕದ ಹಾವಳಿಯ ಹಿನ್ನೆಲೆಯಲ್ಲಿ ಏರ್ಪಟ್ಟಿದ್ದ ಕದನವಿರಾಮ ಮೇ ತಿಂಗಳಲ್ಲಿ ಕೊನೆಗೊಂಡ ಬಳಿಕ ಹುದಿ ಬಂಡುಕೋರರು ಗಡಿಯಾಚೆಗಿನ ದಾಳಿಗಳನ್ನು ಪುನಾರಂಭಿಸಿದ್ದಾರೆ. ಕಳೆದ ಜೂನ್ ಅಂತ್ಯದಲ್ಲಿ ಸೌದಿ ರಾಜಧಾನಿ ರಿಯಾದ್ ಬಳಿ ಕ್ಷಿಪಣಿಗಳನ್ನು ಎಸೆದಿದ್ದರು. ಆನಂತರ ಪ್ರತೀಕಾರವಾಗಿ ಸೌದಿ ನೇತೃತ್ವದ ಮೈತ್ರಿಪಡೆ ಹುದಿ ನೆಲೆಗಳ ಮೇಲೆ ವಾಯುದಾಳಿ ನಡೆಸಿದ್ದವು.

ಈ ಮಧ್ಯೆ ಸೌದಿ ನೇತೃತ್ವದ ಮಿತ್ರಪಡೆಗಳ ವಾಯುದಾಳಿಯಲ್ಲಿ ಯೆಮನ್‌ನಹುದಿ ನಿಯಂತ್ರಣದ ಪ್ರದೇಶದಲ್ಲಿರುವ ಕಾರ್ಖಾನೆಯೊಂದರ ಇಂಧನ ಟ್ಯಾಂಕ್‌ಗಳಿಗೆ ಹಾನಿಯಾಗಿವೆಯೆಂದು ಹುದಿ ಬಂಡುಕೋರರ ಅಲ್ ಮಸಿರಾ ಟಿವಿ ರವಿವಾರ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News