‘ಎಮಿರೇಟ್ಸ್’ನಿಂದ 5 ಭಾರತೀಯ ನಗರಗಳಿಗೆ ವಿಶೇಷ ವಿಮಾನ ಹಾರಾಟ

Update: 2020-08-20 16:05 GMT

ದುಬೈ (ಯುಎಇ), ಆ. 20: ದುಬೈಯ ಪ್ರಮುಖ ವಿಮಾನಯಾನ ಸಂಸ್ಥೆ ಎಮಿರೇಟ್ಸ್ ಆಗಸ್ಟ್ 20ರಿಂದ 31ರವರೆಗೆ ಬೆಂಗಳೂರು, ಕೊಚ್ಚಿ, ದಿಲ್ಲಿ, ಮುಂಬೈ ಮತ್ತು ತಿರುವನಂತಪುರಂ ನಗರಗಳಿಗೆ ಹಾರಾಟಗಳನ್ನು ನಡೆಸಲಿದೆ. ಈ ವಿಶೇಷ ವಿಮಾನಗಳು ಯುಎಇಯಲ್ಲಿದ್ದು, ಮನೆಗೆ ಮರಳಲು ಬಯಸುವ ಭಾರತೀಯ ನಾಗರಿಕರು ಮತ್ತು ಪ್ರಸಕ್ತ ಭಾರತದಲ್ಲಿದ್ದು ಯುಎಇಗೆ ಮರಳಲು ಬಯಸುವ ಯುಎಇ ನಿವಾಸಿಗಳನ್ನು ಸಾಗಿಸಲಿವೆ.

ವಿಮಾನಯಾನಗಳ ವಿವರ ಈ ಕೆಳಗಿನಂತಿದೆ:

ಬೆಂಗಳೂರು: ಆಗಸ್ಟ್ 21, 23, 25, 28 ಮತ್ತು 30

ಕೊಚ್ಚಿ: ಆಗಸ್ಟ್ 20, 22, 24, 27, 29 ಮತ್ತು 31 (ವಿಮಾನಗಳು ಕೊಚ್ಚಿಯಿಂದ ದುಬೈಗೆ ಆಗಸ್ಟ್ 21, 23, 25, 28, 30 ಮತ್ತು ಸೆಪ್ಟಂಬರ್ 1ರಂದು ಹಾರಲಿವೆ).

ದಿಲ್ಲಿ: ಆಗಸ್ಟ್ 20ರಿಂದ 31ರವರೆಗೆ ಪ್ರತಿ ದಿನ ವಿಮಾನ ಹಾರಾಟ.

ಮುಂಬೈ: ಆಗಸ್ಟ್ 20ರಿಂದ 31ರವರೆಗೆ ಪ್ರತಿ ದಿನ ವಿಮಾನ ಹಾರಾಟ.

ತಿರುವನಂತಪುರಂ: ಆಗಸ್ಟ್ 26 (ವಿಮಾನಗಳು ತಿರುವನಂತಪುರಂನಿಂದ ದುಬೈಗೆ ಆಗಸ್ಟ್ 27ರಂದು ಪ್ರಯಾಣಿಸಲಿವೆ).

ಎಲ್ಲ ಹಾರಾಟಗಳನ್ನು ಎಮಿರೇಟ್ಸ್ ಬೋಯಿಂಗ್ 777-300ಇಆರ್ ವಿಮಾನಗಳು ನಿಭಾಯಿಸುತ್ತವೆ. ವಿಮಾನದ ಟಿಕೆಟ್‌ಗಳನ್ನು ಎಮಿರೇಟ್ಸ್ ವೆಬ್‌ಸೈಟ್ ಅಥವಾ ಟ್ರಾವೆಲ್ ಏಜಂಟರ ಮೂಲಕ ಖರೀದಿಸಬಹುದಾಗಿದೆ.

ಭಾರತಕ್ಕೆ ಬರುವ ವಿಮಾನಗಳು ಭಾರತೀಯರಿಗೆ ಮಾತ್ರ

ದುಬೈಯಿಂದ ಭಾರತದ ಐದು ನಗರಗಳಿಗೆ ಬರುವ ವಿಮಾನಗಳಲ್ಲಿ ಯುಎಇಯಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯ ನಾಗರಿಕರಿಗೆ ಮಾತ್ರ ಅವಕಾಶವಿರುತ್ತದೆ.

ಭಾರತದಿಂದ ದುಬೈಗೆ ಹೋಗುವ ವಿಮಾನಗಳಲ್ಲಿ ಯುಎಇ ನಾಗರಿಕರು ಹಾಗೂ ಯುಎಇ ನಿವಾಸಿಗಳಾಗಿರುವ ಭಾರತೀ ಪ್ರಜೆಗಳು ಪ್ರಯಾಣಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News