ಸೌದಿ: ಮೂವರಿಗೆ ಮರಣ ದಂಡನೆ

Update: 2020-09-07 17:33 GMT

ರಿಯಾದ್ (ಸೌದಿ ಅರೇಬಿಯ), ಸೆ. 7: ಜಿದ್ದಾದಲ್ಲಿ ನಡೆದ ದಾಳಿಯೊಂದಕ್ಕೆ ಸಂಬಂಧಿಸಿ ಸೌದಿ ಅರೇಬಿಯದ ನ್ಯಾಯಾಲಯವೊಂದು ಮೂವರಿಗೆ ಮರಣ ದಂಡನೆ ವಿಧಿಸಿದೆ ಎಂದು ಸರಕಾರಿ ಒಡೆತನದ ಅಲ್-ಅಖ್ಬರಿಯ ಟೆಲಿವಿಶನ್ ರವಿವಾರ ವರದಿ ಮಾಡಿದೆ.

2017ರಲ್ಲಿ ಸೌದಿ ಭದ್ರತಾ ಪಡೆಗಳು ಜಿದ್ದಾದಲ್ಲಿನ ಒಂದು ಮನೆಯನ್ನು ಸುತ್ತುವರಿದು ಆ ಮನೆಯಲ್ಲಿದ್ದ ಇಬ್ಬರೊಂದಿಗೆ ಗುಂಡಿನ ಕಾಳಗ ನಡೆಸಿತ್ತು. ಭಯೋತ್ಪಾದಕ ಗುಂಪೊಂದರ ಜೊತೆ ನಂಟು ಹೊಂದಿದ ಆರೋಪವನ್ನು ಎದುರಿಸುತ್ತಿದ್ದ ಆ ವ್ಯಕ್ತಿಗಳು ಬಳಿಕ ತಮ್ಮನ್ನು ತಾವು ಸ್ಫೋಟಿಸಿಕೊಂಡು ಸಾವಿಗೀಡಾಗಿದ್ದರು.

ಅವರೊಂದಿಗೆ ನಂಟು ಹೊಂದಿದ ಆರೋಪದಲ್ಲಿ ಭದ್ರತಾ ಪಡೆಗಳು ಮೂವರನ್ನು ಬಂಧಿಸಿದ್ದವು. ಅವರ ಮೇಲೆ ಬಳಿಕ ಭಯೋತ್ಪಾದನೆ ಆರೋಪವನ್ನು ಹೊರಿಸಲಾಗಿತ್ತು. ನ್ಯಾಯಾಲಯವು ಈಗ ಅವರಿಗೆ ಮರಣ ದಂಡನೆ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News