50 ಲಕ್ಷ ರೂ. ಮೌಲ್ಯದ ವಸ್ತುಗಳಿದ್ದ ಚೀಲ ಹಿಂದಿರುಗಿಸಿದ ಭಾರತೀಯ

Update: 2020-09-13 15:46 GMT
ಸಾಂದರ್ಭಿಕ ಚಿತ್ರ

ದುಬೈ (ಯುಎಇ), ಸೆ. 13: 14,000 ಅಮೆರಿಕ ಡಾಲರ್ (ಸುಮಾರು 10.28 ಲಕ್ಷ ರೂಪಾಯಿ) ಮತ್ತು ಚಿನ್ನವಿದ್ದ ಚೀಲವೊಂದನ್ನು ಪೊಲೀಸರಿಗೆ ಹಸ್ತಾಂತರಿಸಿರುವುದಕ್ಕಾಗಿ ಯುಎಇಯಲ್ಲಿರುವ ಭಾರತೀಯರೊಬ್ಬರನ್ನು ಪೊಲೀಸರು ಗೌರವಿಸಿದ್ದಾರೆ.

ದುಬೈಯಲ್ಲಿ ವಾಸಿಸುತ್ತಿರುವ ರಿತೇಶ್ ಜೇಮ್ಸ್ ಗುಪ್ತರ ಪ್ರಾಮಾಣಿಕತೆಯನ್ನು ದುಬೈ ಪೊಲೀಸರು ಶ್ಲಾಘಿಸಿದ್ದಾರೆ ಹಾಗೂ ಜವಾಬ್ದಾರಿಯುತ ನಿವಾಸಿಯಾಗಿರುವುದಕ್ಕಾಗಿ ಅವರಿಗೆ ಪ್ರಶಂಸಾಪತ್ರವೊಂದನ್ನು ನೀಡಿದ್ದಾರೆ ಎಂದು ‘ಗಲ್ಫ್ ನ್ಯೂಸ್’ ವರದಿ ಮಾಡಿದೆ.

ಅವರು ಪೊಲೀಸರಿಗೆ ಹಸ್ತಾಂತರಿಸಿದ ಚೀಲದಲ್ಲಿ 14,000 ಅಮೆರಿಕ ಡಾಲರ್ ನಗದು ಮತ್ತು 2 ಲಕ್ಷ ದಿರ್ಹಮ್ (ಸುಮಾರು 40 ಲಕ್ಷ ರೂಪಾಯಿ) ಮೌಲ್ಯದ ಚಿನ್ನಾಭರಣಗಳಿದ್ದವು ಎಂದು ಪತ್ರಿಕೆ ಹೇಳಿದೆ.

ಆ ಚೀಲದ ಒಡೆಯರು ಯಾರು ಎನ್ನುವುದು ತಕ್ಷಣಕ್ಕೆ ಗೊತ್ತಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News