ಸೌದಿ ಅರೇಬಿಯಾ: 2021ರ ಜನವರಿ 1ರಿಂದ ಪ್ರಯಾಣದ ಮೇಲಿನ ನಿರ್ಬಂಧ ರದ್ದು

Update: 2020-09-13 18:22 GMT

ದುಬೈ: ದೇಶಕ್ಕೆ ಹಿಂದಿರುಗುವವರಿಗೆ ಮತ್ತು ದೇಶದಿಂದ ಹೊರಹೋಗುವವರ ಮೇಲಿನ  ಪ್ರಯಾಣ ನಿರ್ಬಂಧವನ್ನು ಸೌದಿ ಅರೇಬಿಯಾ ಸಂಪೂರ್ಣವಾಗಿ ಹಿಂಪಡೆಯಲಿದೆ. ನೆಲ, ಸಮುದ್ರ ಮಾರ್ಗ ಮತ್ತು ವಿಮಾನ ನಿಲ್ದಾಣಗಳನ್ನು 2021ರ ಜನವರಿ 1ರಿಂದ ತೆರೆಯಲಿದೆ ಎಂದು ಸೌದಿ ಪ್ರೆಸ್ ಏಜೆನ್ಸಿ ವರದಿ ಮಾಡಿದೆ.

ಕೊರೋನ ಹಿನ್ನೆಲೆಯಲ್ಲಿ ಹೇರಲಾಗಿದ್ದ ನಿರ್ಬಂಧಗಳನ್ನು ಸಡಿಲಗೊಳಿಸುವ ಕ್ರಮವಾಗಿ ಈ ನಿರ್ಧಾರಕ್ಕೆ ಬರಲಾಗಿದೆ.

ಪರಿಸ್ಥಿತಿಯನ್ನು ಅವಲೋಕಿಸಿ ನಿರ್ಬಂಧ ಹಿಂಪಡೆಯುವಿಕೆ ಮತ್ತು ಸಮುದ್ರ, ವಿಮಾನ ಯಾನದ ಮೂಲಕ ದೇಶಕ್ಕೆ ಪ್ರವೇಶಿಸಲು ಅನುಮತಿ ನೀಡುವ ಖಚಿತ ದಿನಾಂಕವನ್ನು ಜನವರಿ 1ಕ್ಕಿಂತ 30 ದಿವಸಗಳ ಮೊದಲು ಮತ್ತೊಮ್ಮೆ ಘೋಷಿಸಲಾಗುವುದು ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News