ಒಮಾನ್: ಸೋಶಿಯಲ್ ಫೋರಂನಿಂದ ಮೂರನೇ ಹಂತದ ರಕ್ತದಾನ ಶಿಬಿರ

Update: 2020-09-15 08:14 GMT

ಒಮಾನ್, ಸೆ.15: ಸೋಶಿಯಲ್ ಫೋರಮ್ ಒಮಾನ್ ಇದರ ವತಿಯಿಂದ  ಸೆ.11ರಂದು ಮಬೇಲದಲ್ಲಿ ರಕ್ತದಾನ ಶಿಬಿರವನ್ನು ನಡೆಯಿತು. 

ಅಲ್ ಸಲಾಮ ಪಾಲಿಕ್ಲಿನಿಕ್ ಮಬೇಲದಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರವನ್ನು ಶಿಬಿರದ ಉಸ್ತುವಾರಿ ಮೊಯ್ದಿನ್ ಸಾಹೇಬ್ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅಲ್ ಸಲಾಮ ಪಾಲಿಕ್ಲಿನಿಕ್ ನ ಡಾ.ರಾಶೀದ್ ಅಲಿ ರಕ್ತದಾನದ ಮಹತ್ವದದ ಬಗ್ಗೆ ಮಾಹಿತಿ ನೀಡಿದರು. 

ವೇದಿಕೆಯಲ್ಲಿ ಒಮಾನ್ ನ ಮಿನಿಸ್ಟರಿ ಆಫ್ ಡಿಫೆನ್ಸ್ ಏರ್ ಪೋರ್ಸ್ ನ ನಿವೃತ್ತ ಅಧಿಕಾರಿ ಹಾಮುದ್ ಸೈದ್ ಅಲ್ ಯಾಯಿ, ರೋಯಲ್ ಗಾರ್ಡ್ ನ ನಾಸಿರ್ ಅಲಿ ನಾಸಿರ್, ಅಲ್ ಸಲಾಮ ಪಾಲಿಕ್ಲಿನಿಕ್ ನ ನಿರ್ದೇಶಕ ಡಾ.ಸಿದ್ದೀಕ್ ಮತ್ತು ಸೋಶಿಯಲ್ ಪೋರಂ ಒಮಾನ್ ನ ನಾಯಕರು ಉಪಸ್ಥಿತರಿದ್ದರು.

ಸುಮಾರು 150ಕ್ಕೂ ಅಧಿಕ ಅನಿವಾಸಿ ಭಾರತೀಯರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

ಕೋವಿಡ್ ನ ಸಂದಿಗ್ಧತೆಯಲ್ಲಿ ಒಮಾನ್ ಆರೋಗ್ಯ ಸಂಸ್ಥೆಯ ರಕ್ತನಿಧಿ ಕೇಂದ್ರದಲ್ಲಿನ ರಕ್ತದ ಅಭಾವವನ್ನು ಮನಗಂಡು ಸೋಶಿಯಲ್ ಫೋರಂ ಒಮಾನ್ ಮತ್ತು ಒಮನ್ ಕೇಂದ್ರ ಆರೋಗ್ಯ ಇಲಾಖೆ ವತಿಯಿಂದ ‘ರಕ್ತದಾನ ಮಾಡಿ ಜೀವ ಉಳಿಸಿ’ ಎಂಬ ಶೀರ್ಷಿಕೆಯಡಿ ರಕ್ತದಾನ ಶಿಬಿರ ಅಭಿಯಾನವನ್ನು ಆಯೋಜಿಸಲಾಗಿತ್ತು.

ವರದಿ: ಇರ್ಫಾನ್ ಉಜಿರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News