ಬಹರೈನ್‌ನಲ್ಲಿ ಇಳಿದ ಇಸ್ರೇಲ್‌ನ ಮೊದಲ ವಾಣಿಜ್ಯ ವಿಮಾನ

Update: 2020-09-23 16:42 GMT
ಸಾಂದರ್ಭಿಕ ಚಿತ್ರ

ಮನಾಮ (ಬಹರೈನ್), ಸೆ. 23: ಇಸ್ರೇಲ್ ಮತ್ತು ಬಹರೈನ್ ನಡುವಿನ ಮೊದಲ ನೇರ ವಾಣಿಜ್ಯ ವಿಮಾನವು ಬಹರೈನ್‌ನಲ್ಲಿ ಭೂಸ್ಪರ್ಶ ಮಾಡಿದೆ. ಇಸ್ರೇಲ್‌ನೊಂದಿಗಿನ ಸಂಬಂಧವನ್ನು ಸಾಮಾನ್ಯ ಸ್ಥಿತಿಗೆ ತರುವ ಒಪ್ಪಂದಕ್ಕೆ ಬಹರೈನ್ ಸಹಿ ಹಾಕಿದ ಒಂದು ವಾರದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.

 ಟೆಲ್ ಅವೀವ್‌ನ ಬೆನ್-ಗುರಿಯನ್ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ‘ಇಸ್ರೇರ್ ಏರ್‌ಲೈನ್ಸ್’ಗೆ ಸೇರಿದ ಏರ್‌ಬಸ್ ಎ320 ವಿಮಾನವೊಂದು ಸುಮಾರು ಮೂರೂವರೆ ಗಂಟೆಗಳ ಪ್ರಯಾಣದ ಬಳಿಕ ಬಹರೈನ್ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿರುವುದನ್ನು ‘ಫ್ಲೈಟ್‌ರಾಡಾರ್24’ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡಿರುವ ವಿಮಾನ ಹಾರಾಟ ಮಾಹಿತಿ ತಿಳಿಸಿದೆ.

ಆ ವಿಮಾನದಲ್ಲಿ ಇಸ್ರೇಲ್ ಸರಕಾರದ ನಿಯೋಗವೊಂದು ಪ್ರಯಾಣಿಸುತ್ತಿತ್ತು ಎಂದು ಇಸ್ರೇಲ್ ಮಾಧ್ಯಮ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News