ಯುಎಇ: ಪ್ರವೇಶ ಪರ್ಮಿಟ್ ನೀಡಿಕೆ ಪುನರಾರಂಭ

Update: 2020-09-24 16:25 GMT

ಅಬುಧಾಬಿ, ಸೆ. 24: ಉದ್ಯೋಗ ಪರ್ಮಿಟ್‌ಗಳನ್ನು ಹೊಂದಿರುವವರನ್ನು ಹೊರತುಪಡಿಸಿ, ಇತರರಿಗೆ ಪ್ರವೇಶ ಪರ್ಮಿಟ್‌ಗಳನ್ನು ನೀಡುವುದನ್ನು ಯುಎಇ ಸೆಪ್ಟಂಬರ್ 24ರಿಂದ ಪುನರಾರಂಭಿಸಿದೆ ಎಂದು ಅಧಿಕಾರಿಗಳು ಪ್ರಕಟಿಸಿದ್ದಾರೆ.

ಕೊರೋನ ವೈರಸ್ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸುವ ಹಾಗೂ ದೇಶದ ಆರ್ಥಿಕತೆಗೆ ಪುನಶ್ಚೇತನ ನೀಡುವ ಕಾರ್ಯಕ್ರಮಗಳ ಭಾಗವಾಗಿ ವೀಸಾಗಳನ್ನು ನೀಡುವುದನ್ನು ಪುನರಾರಂಭಿಸಲಾಗಿದೆ ಎಂದು ಗುರುತು ಮತ್ತು ಪೌರತ್ವ ಪ್ರಾಧಿಕಾರ ಗುರುವಾರ ತಿಳಿಸಿದೆ.

ಕೋವಿಡ್-19 ಸಾಂಕ್ರಾಮಿಕ ಹರಡುವುದನ್ನು ತಡೆಯುವುದಕ್ಕಾಗಿ ವಿದೇಶೀಯರಿಗೆ ನೀಡುವ ಎಲ್ಲ ವೀಸಾಗಳನ್ನು ಪ್ರಾಧಿಕಾರವು ಮಾರ್ಚ್ 17ರಂದು ನಿಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News