×
Ad

ಇಸ್ರೇಲ್-ಫೆಲೆಸ್ತೀನ್ ಮಾತುಕತೆ ಪುನರಾರಂಭಕ್ಕೆ ಅರಬ್, ಯುರೋಪ್ ದೇಶಗಳ ಕರೆ

Update: 2020-09-24 22:04 IST

ಅಮ್ಮಾನ್ (ಜೋರ್ಡಾನ್), ಸೆ. 24: ಸುದೀರ್ಘ ಇಸ್ರೇಲ್-ಫೆಲೆಸ್ತೀನ್ ಸಂಘರ್ಷ ಕೊನೆಗೊಳಿಸಲು ಎರಡು-ದೇಶಗಳ ಸೂತ್ರವೇ ಏಕೈಕ ಮಾರ್ಗವಾಗಿದೆ ಎಂದು ಜೋರ್ಡಾನ್‌ನಲ್ಲಿ ಸಭೆ ನಡೆಸಿರುವ ನಾಲ್ಕು ಅರಬ್ ಮತ್ತು ಯುರೋಪ್ ದೇಶಗಳ ವಿದೇಶ ಸಚಿವರು ಹೇಳಿದ್ದಾರೆ ಹಾಗೂ ಉಭಯ ತಂಡಗಳ ನಡುವಿನ ಮಾತುಕತೆಗಳು ಆರಂಭಗೊಳ್ಳಬೇಕೆಂದು ಗುರುವಾರ ಕರೆ ನೀಡಿದ್ದಾರೆ.

ಫ್ರಾನ್ಸ್, ಈಜಿಪ್ಟ್ ಮತ್ತು ಜೋರ್ಡಾನ್‌ಗಳ ವಿದೇಶ ಸಚಿವರು ಜೋರ್ಡಾನ್ ರಾಜಧಾನಿ ಅಮ್ಮಾನ್‌ನಲ್ಲಿ ನಡೆದ ಸಭೆಯಲ್ಲಿ ಸಶರೀರವಾಗಿ ಭಾಗವಹಿಸಿದರೆ, ಜರ್ಮನಿಯ ವಿದೇಶ ಸಚಿವ ಹೈಕೊ ಮಾಸ್ ಆನ್‌ಲೈನ್ ಮೂಲಕ ಅಶರೀರವಾಗಿ ಪಾಲ್ಗೊಂಡರು.

‘‘ಸಂಘರ್ಷವನ್ನು ಎರಡು-ದೇಶ ಪರಿಹಾರದಂತೆ ಇತ್ಯರ್ಥಪಡಿಸದಿದ್ದರೆ ವಲಯದಲ್ಲಿ ಸಮಗ್ರ ಹಾಗೂ ಶಾಶ್ವತ ಶಾಂತಿ ನೆಲೆಸುವುದಿಲ್ಲ’’ ಎಂದು ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೋರ್ಡಾನ್ ವಿದೇಶ ಸಚಿವ ಅಯ್‌ಮಾನ್ ಅಲ್-ಸಫಾದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News