ಕುವೈತ್: ನೂತನ ಅಮೀರ್ ಆಗಿ ಯುವರಾಜ ಶೇಖ್ ನವಾಫ್ ನೇಮಕ

Update: 2020-09-30 14:55 GMT

ಕುವೈತ್ ಸಿಟಿ, ಸೆ. 30: ಕುವೈತ್‌ನ ನೂತನ ಅಮೀರ್ (ದೊರೆ) ಆಗಿ ಯುವರಾಜ ಶೇಖ್ ನವಾಫ್ ಅಲ್-ಅಹ್ಮದ್ ಅಲ್-ಸಬಾಹ್‌ರನ್ನು ಮಂಗಳವಾರ ನೇಮಿಸಲಾಗಿದೆ. ಕುವೈತ್ ಅಮೀರ್ ಶೇಖ್ ಸಬಾಹ್ ಅಲ್-ಅಹ್ಮದ್ ಅಲ್-ಸಬಾಹ್ ತನ್ನ 91ನೇ ವಯಸ್ಸಿನಲ್ಲಿ ನಿಧನರಾದ ಬಳಿಕ ಈ ನೇಮಕ ಮಾಡಲಾಗಿದೆ.

ನೂತನ ಅಮೀರ್ ಈ ಮೊದಲ ಅಮೀರ್‌ರ ಮಲಸಹೋದರನಾಗಿದ್ದಾರೆ.

‘‘ಸಂವಿಧಾನದ ವಿಧಿಗಳಂತೆ, ಯುವರಾಜ ಶೇಖ್ ನವಾಫ್ ಅಲ್-ಅಹ್ಮದ್ ಅಲ್-ಜಾಬಿರ್ ಅಲ್-ಸಬಾಹ್‌ರನ್ನು ಕುವೈತ್‌ನ ಅಮೀರ್ ಆಗಿ ಸಚಿವ ಸಂಪುಟವು ನೇಮಿಸಿದೆ’’ ಎಂದು ಉಪ ಪ್ರಧಾನಿ ಅನಸ್ ಖಾಲಿದ್ ಅಲ್-ಸಾಲಿಹ್ ಟೆಲಿವಿಶನ್‌ನಲ್ಲಿ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದರು.

ಕುವೈತ್ ಅಮೀರ್ ಶೇಖ್ ಸಬಾಹ್ ಅಲ್-ಅಹ್ಮದ್ ಅಮೆರಿಕದ ಆಸ್ಪತ್ರೆಯೊಂದರಲ್ಲಿ ಮಂಗಳವಾರ ನಿಧನರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News