ನಾಲ್ಕು ಹಂತಗಳಲ್ಲಿ ಉಮ್ರಾ ಯಾತ್ರೆ ಆರಂಭಿಸಿದ ಸೌದಿ

Update: 2020-10-04 09:56 GMT

ಹೊಸದಿಲ್ಲಿ: ಕೊರೋನ ವೈರಸ್ ಸಾಂಕ್ರಾಮಿಕದಿಂದಾಗಿ ಏಳು ತಿಂಗಳಿಂದ ಸ್ಥಗಿತಗೊಂಡಿದ್ದ ವಾರ್ಷಿಕ ಉಮ್ರಾ ಯಾತ್ರೆಗೆ ಸೌದಿ ಅರೇಬಿಯಾ ರವಿವಾರದಿಂದ ಅವಕಾಶ ಮಾಡಿಕೊಟ್ಟಿದೆ. ಎಲ್ಲ ನಾಗರಿಕರು ಮತ್ತು ಯಾತ್ರಾರ್ಥಿಗಳು ವಾರ್ಷಿಕ ಉಮ್ರಾ ನಡೆಸಲು ಅವಕಾಶ ಮಾಡಿಕೊಡಲಾಗಿದೆ.

ಕಳೆದ ಮಾರ್ಚ್‍ನಲ್ಲಿ ಕೊರೋನ ವೈರಸ್ ಸಾಂಕ್ರಾಮಿಕ ಹೆಚ್ಚುವ ಭೀತಿಯಿಂದ ಉಮ್ರಾ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಜುಲೈನಲ್ಲಿ ದೇಶದಲ್ಲಿ ವಾಸವಿರುವ 1000 ಯಾತ್ರಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ಸೌದಿ ಅರೇಬಿಯಾದ ಹಜ್‍ಗೆ ಪ್ರತಿ ವರ್ಷ ಸುಮಾರು ವಿಶ್ವದ ಎಲ್ಲೆಡೆಗಳಿಂದ 25 ಲಕ್ಷ ಯಾತ್ರಾರ್ಥಿಗಳು ಆಗಮಿಸುತ್ತಾರೆ. ಸೌದಿ ಅರೇಬಿಯಾದಲ್ಲಿ 3.36 ಲಕ್ಷ ಕೊರೋನ ವೈರಸ್ ಪ್ರಕರಣಗಳು ವರದಿಯಾಗಿದ್ದು, 3.21 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ 4850 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

►ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ನಾಲ್ಕು ಹಂತಗಳ ಯಾತ್ರೆಗೆ ಅವಕಾಶ ಮಾಡಿಕೊಟ್ಟಿದೆ.
►ರವಿವಾರದಿಂದ ಆರಂಭವಾಗುವ ಮೊದಲ ಹಂತದಲ್ಲಿ ಪ್ರತಿದಿನ ದೇಶದ 6000 ನಾಗರಿಕರು ಮತ್ತು ನಿವಾಸಿಗಳಿಗೆ ಅವಕಾಶವಿದೆ. ಇದು ಒಟ್ಟು ಸಾಮರ್ಥ್ಯದ ಶೇಕಡ 30ರಷ್ಟಾಗಿದೆ.
►ಎರಡನೇ ಹಂತದಲ್ಲಿ ದೇಶದ 15 ಸಾವಿರ ಯಾತ್ರಿಗಳಿಗೆ ಅವಕಾಶವಿದ್ದು, ಅಕ್ಟೋಬರ್ 18ರಿಂದ ಆರಂಭ.
►ನವೆಂಬರ್ 1ರಿಂದ ಮೂರನೇ ಹಂತ ಆರಂಭವಾಗಲಿದ್ದು, ದೇಶೀಯ ಹಾಗೂ ಇತರ ದೇಶಗಳಿಂದ ಬರುವ ಯಾತ್ರಾರ್ಥಿಗಳಿಗೆ ಉಮ್ರಾ ಸಾಮಥ್ರ್ಯದ ಶೇಕಡ 100ರಷ್ಟು ಅವಕಾಶ ಮಾಡಿಕೊಡಲಾಗುತ್ತದೆ. ಕೋವಿಡ್-19 ಸೋಂಕಿನಿಂದ ಮುಕ್ತವಾದ ದೇಶಗಳ ಯಾತ್ರಿಗಳಿಗೆ ಮಾತ್ರ ಅವಕಾಶ ಇರುತ್ತದೆ.
►ನಾಲ್ಕನೇ ಹಂತದಲ್ಲೂ ಒಟ್ಟು ಸಾಮರ್ಥ್ಯದ ಶೇಕಡ 100ರಷ್ಟಕ್ಕೆ ಅವಕಾಶ ಇರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News