ಯುಎಇ: ಸರಕಾರಿ, ಅರೆ ಸರಕಾರಿ ಉದ್ಯೋಗಿಗಳು, ಮನೆಗೆಲಸಗಾರರಿಗೆ ಪರ್ಮಿಟ್ ನೀಡಿಕೆ ಪುನರಾರಂಭ

Update: 2020-10-05 15:05 GMT
ಫೈಲ್ ಚಿತ್ರ

ದುಬೈ, ಅ. 5: ಸರಕಾರಿ ಮತ್ತು ಅರೆ ಸರಕಾರಿ ಉದ್ಯೋಗಗಳಿಗಾಗಿ ವಿದೇಶೀಯರಿಗೆ ಪ್ರವೇಶ ಮತ್ತು ಉದ್ಯೋಗ ಪರ್ಮಿಟ್‌ಗಳನ್ನು ನೀಡುವುದನ್ನು ಹಾಗೂ ಮನೆಗೆಲಸಗಾರರಿಗೆ ವೀಸಾಗಳನ್ನು ನೀಡುವುದನ್ನು ಯುಎಇಯು ಮುಂದುವರಿಸಲಿದೆ ಎಂದು ಅಧಿಕಾರಿಗಳು ಸೋಮವಾರ ಘೋಷಿಸಿದ್ದಾರೆ.

ದೇಶವನ್ನು ಪ್ರವೇಶಿಸುವ ಮುನ್ನ ವಿದೇಶೀಯರಿಗಾಗಿ ನಡೆಸಲಾಗುವ ಪಿಸಿಆರ್ ಪರೀಕ್ಷೆಗಳು ಸೇರಿದಂತೆ, ಕೋವಿಡ್-19 ಹರಡುವುದನ್ನು ತಡೆಯಲು ಅಗತ್ಯವಾದ ಎಲ್ಲ ಕ್ರಮಗಳು ಮತ್ತು ಅಗತ್ಯವೆಂದು ಕಂಡಬಂದರೆ ಕ್ವಾರಂಟೈನ್‌ಗೆ ಒಳಗಾಗುವುದು ಚಾಲ್ತಿಯಲ್ಲಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಯುಎಇಯ ಅಧಿಕೃತ ಸುದ್ದಿ ಸಂಸ್ಥೆ ಡಬ್ಲುಎಎಮ್, ಕೇಂದ್ರ ಗುರುತು ಮತ್ತು ಪೌರತ್ವ ಪ್ರಾಧಿಕಾರದ ಅಧಿಕಾರಿಗಳನ್ನು ಉಲ್ಲೇಖಿಸಿ ಈ ಪ್ರಕಟನೆಯನ್ನು ನೀಡಿದೆ.

ಸರಕಾರಿ ಮತ್ತು ಅರೆ ಸರಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಕೆಲಸಗಾರರು ಸೇರಿದಂತೆ, ಯುಎಇಯ ವಾಸ್ತವ್ಯ ವೀಸಾಗಳನ್ನು ಹೊಂದಿರುವ ವಲಸಿಗರು ಯಾವುದೇ ರಾಷ್ಟ್ರೀಯತೆ ಹೊಂದಿದವರಾಗಿದ್ದರೂ ಯುಎಇ ಪ್ರವೇಶಿಸುವುದನ್ನು ಮುಂದುವರಿಸಬಹುದು ಎಂದು ಅದು ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News