ದುಬೈ: ಅನಧಿಕೃತ ವಾಸಕ್ಕೆ ದಂಡ ವಿಧಿಸುವ ಪ್ರಕ್ರಿಯೆ ಆರಂಭ

Update: 2020-10-11 16:45 GMT

ದುಬೈ (ಯುಎಇ), ಅ. 11: ಮಾರ್ಚ್ 1ರಿಂದ ಜುಲೈ 12ರವರೆಗಿನ ಅವಧಿಯಲ್ಲಿ ವೀಸಾ ಅವಧಿ ಮುಕ್ತಾಯಗೊಂಡ ದುಬೈ ನಿವಾಸಿಗಳಿಗೆ ದಂಡ ಹಾಕುವ ಪ್ರಕ್ರಿಯೆ ರವಿವಾರ ಆರಂಭಗೊಂಡಿದೆ.

ವೀಸಾವನ್ನು ನವೀಕರಿಸುವ ಅಥವಾ ದೇಶ ತೊರೆಯುವ ಗಡುವು ಶನಿವಾರ ಮುಗಿದಿದೆ. ಗಡುವು ಮುಗಿದ ಬಳಿಕ ಅನಧಿಕೃತವಾಗಿ ನೆಲೆಸಿರುವುದಕ್ಕಾಗಿ ವಿಧಿಸಲಾಗುವ ದಂಡವು ಅನ್ವಯಿಸುತ್ತದೆ ಎಂದು ಅಮೀರ್ ಸೆಂಟರ್ ಉದ್ಯೋಗಿಗಳು ಮತ್ತು ವೀಸಾ ಸಲಹಾಕಾರರು ಹೇಳಿದ್ದಾರೆ.

ಸ್ವಯಂಚಾಲಿತ ವೀಸಾ ವಿಸ್ತರಣೆಗಳಿಗೆ ಸಂಬಂಧಿಸಿದ ಎಲ್ಲ ಸರಕಾರಿ ಆದೇಶಗಳನ್ನು ರದ್ದುಪಡಿಸಲು ಯುಎಇ ಸಚಿವ ಸಂಪುಟ ನಿರ್ಧರಿಸಿದ ಬಳಿಕ, ಗುರುತು ಮತ್ತು ಪೌರತ್ವ ಪ್ರಾಧಿಕಾರವು ಜುಲೈ 2ರಿಂದ ವೀಸಾ ನವೀಕರಣ ಅರ್ಜಿಗಳನ್ನು ಸ್ವೀಕರಿಸಲು ಆರಂಭಿಸಿದೆ.

ಮಾರ್ಚ್ 1 ಮತ್ತು ಜುಲೈ 12ರ ನಡುವಿನ ಅವಧಿಯಲ್ಲಿ ವೀಸಾ ಅವಧಿ ಮುಕ್ತಾಯಗೊಂಡ ವಲಸಿಗರ ಕೃಪಾ ಅವಧಿ ಅಕ್ಟೋಬರ್ 10ರಂದು ಕೊನೆಗೊಂಡಿದೆ.

ಅವಧಿ ಮೀರಿ ವಾಸ: ದಿನಕ್ಕೆ 25 ದಿರ್ಹಮ್ ದಂಡ

ಅವಧಿ ಮೀರಿದ ವಾಸದ ಮೊದಲ ದಿನ ವಲಸಿಗರು 125 ದಿರ್ಹಮ್ (ಸುಮಾರು 2,483 ರೂಪಾಯಿ) ದಂಡ ಪಾವತಿಸಬೇಕಾಗುತ್ತದೆ. ಎರಡನೇ ದಿನದಿಂದ ಅವರು ಪ್ರತಿ ದಿನ 25 ದಿರ್ಹಮ್ (ಸುಮಾರು 496 ರೂಪಾಯಿ) ದಂಡ ಪಾವತಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News