×
Ad

ನೋಟ್‌ಗಳನ್ನು ಬಿಸಿಲಿಗೆ ಒಡ್ಡುವುದರಿಂದ ಕೊರೋನ ವೈರಸ್ ನಾಶ: ಯುಎಇ ವೈದ್ಯರು

Update: 2020-10-13 22:00 IST

ದುಬೈ (ಯುಎಇ), ಅ. 13: ಕೊರೋನ ವೈರಸ್ ಕಾಗದ ಕರೆನ್ಸಿಗಳ ಮೂಲಕ ಹರಡುವುದನ್ನು ತಪ್ಪಿಸಲು ಕರೆನ್ಸಿ ನೋಟ್‌ಗಳನ್ನು ಬಿಸಿಲಿಗೆ ಒಡ್ಡುವುದು ಸಂಭಾವ್ಯ ಪರಿಹಾರವಾಗಬಹುದು ಎಂದು ಯುಎಇಯ ವೈದ್ಯರು ಹೇಳಿದ್ದಾರೆ.

ಕರೆನ್ಸಿ ನೋಟ್‌ಗಳೊಂದಿಗೆ ವ್ಯವಹರಿಸುವಾಗ ಜಾಗರೂಕತೆ ವಹಿಸಿ, ಆದರೆ ಅತಿ ಹೆದರಿಕೆ ಬೇಡ ಎಂದು ಅವರು ಜನರಿಗೆ ಸಲಹೆ ನೀಡಿದ್ದಾರೆ.

‘‘ಕೊರೋನ ವೈರಸ್ ಅತಿನೇರಳೆ ಕಿರಣಗಳ ಎದುರು ನಿಲ್ಲುವುದಿಲ್ಲ. ಯುಎಇಯಲ್ಲಿ ನಾವು ಬೇಕಾದಷ್ಟು ಅತಿನೇರಳೆ ಕಿರಣ (ಅಲ್ಟ್ರಾವಾಯಲೆಟ್ ರೇ)ಗಳನ್ನು ಹೊಂದಿದ್ದೇವೆ. ಕರೆನ್ಸಿ ನೋಟ್‌ಗಳನ್ನು ಬಿಸಿಲಿಗೆ ಒಡ್ಡಿದರೆ ಅದರಲ್ಲಿರುವ ಎಲ್ಲ ಕ್ರಿಮಿಗಳು ಸಾಯುತ್ತವೆ. ನಾಣ್ಯಗಳನ್ನು ನೀರು ಮತ್ತು ಸಾಬೂನಿನಿಂದ ತೊಳೆಯಬಹುದು ಅಥವಾ ಆಲ್ಕೋಹಾಲ್ ದ್ರಾವಣವನ್ನು ಸಿಂಪಡಿಸಬಹುದು’’ ಎಂದು ಮೆಡ್‌ಕೇರ್ ಹಾಸ್ಪಿಟಲ್ಸ್ ಮತ್ತು ಮೆಡಿಕಲ್ ಸೆಂಟರ್ಸ್‌ನಲ್ಲಿ ತುರ್ತು ಸೇವೆಗಳ ಮುಖ್ಯಸ್ಥರಾಗಿರುವ ಡಾ. ಸಿರಿಲ್ ನೋಯಲ್ ಹೇಳಿದ್ದಾರೆ.

ಕೋವಿಡ್-19 ವೈರಸ್ ಬ್ಯಾಂಕ್ ನೋಟ್‌ಗಳಲ್ಲಿ 28 ದಿನಗಳ ಕಾಲ ಬದುಕಿರಬಲ್ಲದು ಎಂಬುದಾಗಿ ಆಸ್ಟ್ರೇಲಿಯದ ಸಿಎಸ್‌ಐಆರ್‌ಒ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಬಹಿರಂಗಗೊಂಡ ಬಳಿಕ ಕಾಗದದ ನೋಟ್‌ಗಳ ಬಗ್ಗೆ ಜನರಲ್ಲಿ ಹೆದರಿಕೆ ಆರಂಭವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News