ಕುಟುಂಬಗಳು ವಾಸಿಸುವ ಸ್ಥಳದಿಂದ ಅವಿವಾಹಿತರು, ಕಾರ್ಮಿಕರ ತೆರವು: ಶಾರ್ಜಾ ನಗರದಲ್ಲಿ ಕಾರ್ಯಾಚರಣೆ ಆರಂಭ

Update: 2020-10-16 18:14 GMT

ಶಾರ್ಜಾ (ಯುಎಇ), ಅ. 16: ಕುಟುಂಬಗಳ ವಾಸಕ್ಕಾಗಿ ನಿಯೋಜಿಸಲಾಗಿರುವ ಸ್ಥಳಗಳಲ್ಲಿ ವಾಸಿಸುತ್ತಿರುವ ಅವಿವಾಹಿತರು ಮತ್ತು ಕಾರ್ಮಿಕರನ್ನು ತೆರವುಗೊಳಿಸುವ ಅಭಿಯಾನವನ್ನು ಶಾರ್ಜಾ ನಗರ ಮುನಿಸಿಪಾಲಿಟಿ ಶುಕ್ರವಾರದಿಂದ ಆರಂಭಿಸಿದೆ.

ಶಾರ್ಜಾದ ಆಡಳಿತಗಾರ ಹಾಗೂ ಸುಪ್ರೀಮ್ ಕೌನ್ಸಿಲ್ ಸದಸ್ಯ ಶೇಖ್ ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಖಾಸಿಮಿಯ ಸೂಚನೆಗಳಂತೆ, ಕುಟುಂಬಗಳ ನೆಮ್ಮದಿ ಮತ್ತು ಸುರಕ್ಷತೆಗಾಗಿ ಮುನಿಸಿಪಾಲಿಟಿಯು ಈ ಕ್ರಮ ತೆಗೆದುಕೊಂಡಿದೆ.

ಶಾರ್ಜಾ ಪೊಲೀಸ್ ಮತ್ತು ಶಾರ್ಜಾ ವಿದ್ಯುತ್, ನೀರು ಮತ್ತು ಅನಿಲ ಪ್ರಾಧಿಕಾರ ಸಹಕಾರದೊಂದಿಗೆ ರೂಪಿಸಲಾದ ಯೋಜನೆಯಂತೆ ಈ ಅಭಿಯಾನವನ್ನು ಜಾರಿಗೊಳಿಸಲಾಗುತ್ತಿದೆ.

ಶಾರ್ಜಾ ನಗರದ ಅಲ್-ಖದಿಸಿಯ ಎಂಬ ಪ್ರದೇಶದಲ್ಲಿ ಪ್ರಸಕ್ತ ತೆರವು ಅಭಿಯಾನ ಜಾರಿಯಲ್ಲಿದೆ. ಶನಿವಾರದಿಂದ ನಗರದ ಇತರ ಹಲವಾರು ಪ್ರದೇಶಗಳಲ್ಲಿ ಈ ಅಭಿಯಾನವನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಶಾರ್ಜಾ ನಗರ ಮುನಿಸಿಪಾಲಿಟಿಯ ಮಹಾನಿರ್ದೇಶಕ ತಬೀತ್ ಅಲ್ ತುರೈಫಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News