ದುಬೈ ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಹಾಕಿಕೊಂಡಿರುವ 66 ಭಾರತೀಯರು

Update: 2020-10-20 17:07 GMT

ದುಬೈ (ಯುಎಇ), ಅ. 20: ಸಂದರ್ಶಕ ವೀಸಾಗಳನ್ನು ಹೊಂದಿರುವ 66 ಭಾರತೀಯರು ಈಗಲೂ ದುಬೈ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ‘ಖಲೀಜ್ ಟೈಮ್ಸ್’ ಪತ್ರಿಕೆಗೆ ತಿಳಿಸಿದ್ದಾರೆ.

206 ಪಾಕಿಸ್ತಾನೀಯರೂ ಅದೇ ವಿಮಾನ ನಿಲ್ದಾಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ನಿರ್ದಿಷ್ಟ ಪ್ರವೇಶ ನಿಯಮಾವಳಿಗಳನ್ನು ಅನುಸರಿಸಲು ವಿಫಲವಾಗಿರುವುದಕ್ಕಾಗಿ ಅವರಿಗೆ ಈ ಸ್ಥಿತಿ ಒದಗಿದೆ.

ಇಬ್ಬರು ಮಹಿಳೆಯರು ಸೇರಿದಂತೆ 66 ಭಾರತೀಯ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ದುಬೈಯಲ್ಲಿರುವ ಭಾರತೀಯ ಕೌನ್ಸುಲೇಟ್ ಕಚೇರಿಯಲ್ಲಿ ಕೌನ್ಸುಲ್ ಅಧಿಕಾರಿಯಾಗಿರುವ ನೀರಜ್ ಅಗರ್‌ವಾಲ್ ತಿಳಿಸಿದರು.

‘‘ಗೋಏರ್ ವಿಮಾನದಲ್ಲಿ ದಿಲ್ಲಿಯಿಂದ ಪ್ರಯಾಣಿಸಿದ ಸುಮಾರು 59 ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ 48 ಗಂಟೆಗಳಿಗೂ ಅಧಿಕ ಕಾಲ ಸಿಕ್ಕಿಹಾಕಿಕೊಂಡಿದ್ದಾರೆ’’ ಎಂದರು.

ಉಳಿದ ಏಳು ಪ್ರಯಾಣಿಕರು ಎಮಿರೇಟ್ ಏರ್‌ಲೈನ್ಸ್‌ನಲ್ಲಿ ದುಬೈಗೆ ಬಂದವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News