ಅ.30: ಕೆಸಿಎಫ್ ಶಾರ್ಜಾ ಝೋನ್ ಮೀಲಾದ್ ಸಮಾವೇಶ

Update: 2020-10-29 14:22 GMT

ಶಾರ್ಜಾ, ಅ.29: 'ಪ್ರವಾದಿ ಹಾದಿಯಲ್ಲಿ ಗೆಲುವಿದೆ' ಎಂಬ ಘೋಷವಾಕ್ಯದಲ್ಲಿ ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್) ಅಂತಾರಾಷ್ಟ್ರ ಮಟ್ಟದಲ್ಲಿ ಆನ್‍ಲೈನ್ ಮೂಲಕ ನಡೆಸುವ ಮೀಲಾದ್ ಸಮಾವೇಶದ ಪ್ರಯುಕ್ತ ಶಾರ್ಜಾ ಝೋನ್ ವತಿಯಿಂದ ನಡೆಯುವ ಕಾರ್ಯಕ್ರಮವು ಅ.30ರಂದು ಯುಎಇ ಸಮಯ ಸಂಜೆ 6 ಗಂಟೆಗೆ ನಡೆಯಲಿದೆ.

ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ಕಾರ್ಯಕ್ರಮ ಉದ್ಘಾಟಿಸುವರು. ಝೋನ್ ಅಧ್ಯಕ್ಷ ಅಬೂ ಸ್ವಾಲಿಹ್ ಸಖಾಫಿ ದುಆಗೈಯುವರು.

ಕೆಸಿಎಫ್ ಶಾರ್ಜಾ ಝೋನ್ ಪ್ರ.ಕಾರ್ಯದರ್ಶಿ ಮುಹಮ್ಮದ್ ರಜಬ್ ಉಚ್ಚಿಲ ಸ್ವಾಗತ ಭಾಷಣ ಮಾಡುವರು.

ಖ್ಯಾತ ವಾಗ್ಮಿ ನೌಫಲ್ ಸಖಾಫಿ ಕಳಸ ಹುಬ್ಬುರ್ರಸೂಲ್ ಪ್ರವಚನ ನೀಡುವರು. ಅಸ್ಸೈಯದ್ ಶಿಹಾಬುದ್ದೀನ್ ಇಂಬಿಚ್ಚಿಕೋಯ ತಂಙಳ್ ನೇತೃತ್ವದಲ್ಲಿ ಪ್ರಾರ್ಥನಾ ಸಂಗಮ ನಡೆಯಲಿದೆ.

 ಮೌಲೀದ್ ಪಾರಾಯಣದ ನೇತೃತ್ವವನ್ನು ಝೋನ್ ಶಿಕ್ಷಣ ವಿಭಾಗದ ಅಧ್ಯಕ್ಷ ಅಬ್ದುಲ್ ಅಝೀಝ್ ಸಖಾಫಿ ವಹಿಸುವರು. ಯುವ ಹಾಡುಗಾರ ಫಾರೂಕ್ ಕುಂಜಿಲ ನೇತೃತ್ವದ ತಂಡವು ಬುರ್ದಾ ಆಲಾಪನೆ ಮಾಡಲಿದ್ದು, ಮಾಸ್ಟರ್ ಹಾಫಿಳ್ ಕಿರಾಅತ್ ಪಠಿಸುವರು.

  ಮೀಲಾದ್ ಸಮಿತಿ ಅಧ್ಯಕ್ಷ ಝೈನುದ್ದೀನ್ ಹಾಜಿ ಬೆಳ್ಳಾರೆ ಪ್ರಾಸ್ತಾವಿಕವಾಗಿ ಭಾಷಣ ಮಾಡುವರು. ಬಹು ನಿರೀಕ್ಷಿತ ಮರ್ಕಝುಲ್ ಇಸ್ಲಾಮಿ ಸಂಸ್ಥೆಯ ಕುರಿತಾದ ಪೂರ್ಣ ಚಿತ್ರಣವನ್ನು ಕೆಸಿಎಫ್ ಯುಎಇ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಇಬ್ರಾಹೀಂ ಸಖಾಫಿ ಕೆದುಂಬಾಡಿ ವೀಕ್ಷಕರ ಮುಂದಿಡಲಿದ್ದಾರೆ.

ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಡಾ.ಶೇಖ್ ಬಾವಾ ಹಾಜಿ, ಆರ್ಥಿಕ ವಹಿವಾಟುಗಳ ನಿಯಂತ್ರಕ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಲ, ಸಂಘಟನಾ ಸಮಿತಿಯ ಅಧ್ಯಕ್ಷ ಪಿ.ಎಂ.ಅಬ್ದುಲ್ ಹಮೀದ್ ಈಶ್ವರಮಂಗಲ, ಗಲ್ಫ್ ಇಶಾರಾ ಕೋ ಆರ್ಡಿನೇಟರ್ ಉಸ್ಮಾನ್ ಹಾಜಿ, ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಮೂಸಾ ಹಾಜಿ ಬಸರಾ, ಕೋಶಾಧಿಕಾರಿ ಇಬ್ರಾಹೀಂ ಹಾಜಿ ಬ್ರೈಟ್ ಮಾರ್ಬಲ್, ಶಾರ್ಜಾ ಝೋನ್ ಇಹ್ಸಾನ್ ಸಮಿತಿಯ ಅಧ್ಯಕ್ಷ ಅಬ್ದುರ್ರಝಾಕ್ ಹಾಜಿ ಜೆಲ್ಲಿ, ಕೋಶಾಧಿಕಾರಿ ನಲ್ಕ ಅಬ್ದುಲ್ಲಾ ಹಾಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮೀಲಾದ್ ಸಮಿತಿಯ ಪ್ರಧಾನ ಕಾರ್ಯದರ್ಶಿ ನೌಶಾದ್ ಯು.ಟಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News