ಸೌದಿ: ಫ್ರಾನ್ಸ್ ಕೌನ್ಸುಲೇಟ್ ಕಚೇರಿಯ ಸಿಬ್ಬಂದಿಗೆ ಇರಿತ

Update: 2020-10-29 16:36 GMT

ಜಿದ್ದಾ (ಸೌದಿ ಅರೇಬಿಯ), ಅ. 29: ಸೌದಿ ಅರೇಬಿಯದ ಜಿದ್ದಾ ನಗರದಲ್ಲಿರುವ ಫ್ರಾನ್ಸ್ ಕೌನ್ಸುಲೇಟ್ ಕಚೇರಿಯಯ ಭದ್ರತಾ ಸಿಬ್ಬಂದಿಯೊಬ್ಬರನ್ನು ಗುರುವಾರ ವ್ಯಕ್ತಿಯೊಬ್ಬ ಚೂರಿಯಿಂದ ಇರಿದು ಗಾಯಗೊಳಿಸಿದ್ದಾನೆ.

ಪ್ರವಾದಿಯ ವ್ಯಂಗ್ಯಚಿತ್ರಗಳ ಪ್ರಕಟನೆಗೆ ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಬೆಂಬಲ ನೀಡಿದ ಬಳಿಕ ಮುಸ್ಲಿಮ್ ಬಾಹುಳ್ಯದ ದೇಶಗಳಲ್ಲಿ ಪ್ರತಿಭಟನೆ ನಡೆಯುತ್ತಿರುವಂತೆಯೇ ಈ ಘಟನೆ ನಡೆದಿದೆ.

‘‘ದಾಳಿ ನಡೆದ ತಕ್ಷಣ ದಾಳಿಕೋರನನ್ನು ಸೌದಿ ಭದ್ರತಾ ಪಡೆಗಳು ಬಂಧಿಸಿವೆ. ಫ್ರಾನ್ಸ್ ಕೌನ್ಸುಲೇಟ್ ಕಚೇರಿಯ ಕಾವಲುಗಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ’’ ಎಂದು ಫ್ರಾನ್ಸ್ ರಾಯಭಾರ ಕಚೇರಿಯು ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News