ಡಿ.ಕೆ.ಎಸ್.ಸಿ. ಜುಬೈಲ್ ಘಟಕದಿಂದ ಸಂಸ್ಥಾಪನ ದಿನಾಚರಣೆ, ಬೇಕಲ್ ಉಸ್ತಾದರ ಅನುಸ್ಮರಣಾ ಕಾರ್ಯಕ್ರಮ

Update: 2020-11-08 06:14 GMT

ಜುಬೈಲ್, ನ.8: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ಡಿ.ಕೆ.ಎಸ್.ಸಿ.) ಮಂಗಳೂರು, ದಮ್ಮಾಮ್ ಝೋನ್ ಅಧೀನದ ಅಲ್ ಜುಬೈಲ್ ಘಟಕದ ವತಿಯಿಂದ ಡಿ.ಕೆ.ಎಸ್.ಸಿ. ಸಂಸ್ಥಾಪನಾ ದಿನ, ಹುಬ್ಬುರ್ರಸೂಲ್ ಮೌಲಿದ್ ಹಾಗೂ ತಾಜುಲ್ ಫುಖಹಾ ಶೈಖುನಾ ಇಬ್ರಾಹೀಂ ಮುಸ್ಲಿಯಾರ್ ಬೇಕಲ ಉಸ್ತಾದರ ಅನುಸ್ಮರಣಾ ಕಾರ್ಯಕ್ರಮವು ಇತ್ತೀಚೆಗೆ  ಜುಬೈಲ್ ಡಿ.ಕೆ.ಎಸ್.ಸಿ. ಆಡಿಟೋರಿಯಂನಲ್ಲಿ ಜರಗಿತು. 

ಡಿ.ಕೆ.ಎಸ್.ಸಿ. ಜುಬೈಲ್ ಘಟಕದ ಅಡ್ವೈಸರ್ ಹಾಗೂ ತಜ್ವೀದ್ ಕ್ಲಾಸ್ ನ ಪ್ರಾಧ್ಯಾಪಕ ಅಬ್ದುಲ್ ಅಝೀಝ್ ಸಅದಿ ನೇತೃತ್ವದಲ್ಲಿ ಹುಬ್ಬುರ್ರಸೂಲ್ ಮೌಲಿದ್ ಮಜ್ಲಿಸ್ ನಡೆಯಿತು. ಬಳಿಕ ಮಾತನಾಡಿದ ಅವರು, ಬೇಕಲ್ ಉಸ್ತಾದರ ಜೀವನ ಶೈಲಿ ಹಾಗೂ ಅವರಿಗಿದ್ದ ಅಪಾರ ಪಾಂಡಿತ್ಯದ ಬಗ್ಗೆ ವಿವರಿಸಿದರು. ಅವರ ಅಗಲುವಿಕೆಯು ಸಮುದಾಯಕ್ಕೆ ತುಂಬಲಾರದ ನಷ್ಟ ಎಂದು ತಿಳಿಸಿದರು.

 ಡಿ.ಕೆ.ಎಸ್.ಸಿ. ಬೆಳ್ಳಿ ಹಬ್ಬ ಸಂಸ್ಥಾಪಕ ದಿನಾಚರಣೆಯ ಸವಿನೆನಪಿಗಾಗಿ ಡಿ.ಕೆ.ಎಸ್.ಸಿ. ಸ್ಥಾಪಕ ಸದಸ್ಯರಾದ ಅಬ್ಬಾಸ್ ಕುಳಾಯಿ ಹಾಗೂ ಅಬ್ದುಲ್ ಗಫೂರ್ ಸಜೀಪ ಅವರನ್ನು ಸನ್ಮಾನಿಸಲಾಯಿತು.

ಡಿ.ಕೆ.ಎಸ್.ಸಿ. ಕೇಂದ್ರ ಸಮಿತಿಯ ಕಾರ್ಯದರ್ಶಿ ಅಬೂಬಕರ್ ಬರ್ವ, ಕೇಂದ್ರ ಸಮಿತಿಯ ಉಪಾಧ್ಯಕ್ಷ ರಫೀಕ್‌ ಮಾತನಾಡಿದರು.

ಡಿ.ಕೆ.ಎಸ್.ಸಿ. ಜುಬೈಲ್ ಘಟಕದ ಮಾಸಿಕ ಸಭೆಯ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಸಮೀರ್ ಕೃಷ್ಣಾಪುರ ವಹಿಸಿದ್ದರು. ಮಾಸಿಕ ವರದಿಯನ್ನು ಘಟಕದ ಪ್ರಧಾನ ಕಾರ್ಯದರ್ಶಿ ಉಬೈದ್ ಸುರಿಬೈಲ್ ಹಾಗೂ ಲೆಕ್ಕ ಪತ್ರವನ್ನು ಅಬ್ದುಲ್ ಗಫೂರ್ ಸಜೀಪ ವಾಚಿಸಿದರು.

ಡಿ.ಕೆ.ಎಸ್.ಸಿ. ಬುಬೈಲ್ ಘಟಕದ ಘನ ಅಧ್ಯಕ್ಷ ಸಮೀರ್ ಕೃಷ್ಣಾಪುರ ಸ್ವಾಗತಿಸಿ, ಘಟಕದ ಕೋಶಾಧಿಕಾರಿ ಅಲ್ತಾಫ್ ಬಳ್ಕುಂಜೆ ವಂದಿಸಿದರು. ಕೇಂದ್ರ ಸಮಿತಿಯ ನಿಕಟಪೂರ್ವ ಕಾರ್ಯಾಧ್ಯಕ್ಷ ಅಬ್ದುಲ್ ಹಮೀದ್ ಉಳ್ಳಾಲ (ಅರಮೆಕ್ಸ್) ಕಾರ್ಯಕ್ರಮ ನಿರೂಪಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News