ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಯುಎಇ ರಾಷ್ಟೀಯ ಸಮಿತಿಗೆ ನೂತನ ಸಾರಥ್ಯ

Update: 2020-11-21 16:18 GMT
ಅಬ್ದುಲ್ ರಹಿಮಾನ್, ಎಸ್. ಯೂಸುಫ್, ಇಬ್ರಾಹಿಂ ಹಾಜಿ

ದುಬೈ: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ (ರಿ) ಮಂಗಳೂರು ಇದರ ಯುಎಇ ರಾಷ್ಟೀಯ ಸಮಿತಿಯ ಮಹಾ ಸಭೆಯು ನ.13 ರಂದು ಸಮಿತಿಯ ಅಧ್ಯಕ್ಷರಾದ ಹಾಜಿ ಮುಹಮ್ಮದ್ ಇಕ್ಬಾಲ್ ಕಣ್ಣಂಗಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಡಿಕೆಯಸ್ಸಿ ಅಲ್ ನಾದಾ ಯುನಿಟ್ ಅಧ್ಯಕ್ಷರಾದ ಬಿಟಿ ಅಶ್ರಫ್ ಲತೀಫಿ ಉಸ್ತಾದರು ದುಆ ನೆರವೇರಿಸಿದರು. ಅಬ್ಬು ಹಾಜಿ ಕಿನ್ಯ ಕಿರಾಅತ್ ಪಠಿಸಿದರು. ಕಾರ್ಯದರ್ಶಿ ಕಮರುದ್ದೀನ್ ಗುರುಪುರ ವರದಿ ವಾಚಿಸಿದ ನಂತರ ಲೆಕ್ಕ ಪರಿಶೋಧಕರಾದ ಅಬ್ದುಲ್ಲ ಪೆರುವಾಯಿ ಹಾಗೂ ಕೋಶಾಧಿಕಾರಿ ಇಬ್ರಾಹಿಂ ಹಾಜಿ ಕಿನ್ಯ ಲೆಕ್ಕ ಪತ್ರವನ್ನು ಮಂಡಿಸಿದರು. 

ನಂತರ ಮಾತನಾಡಿದ ಸಭಾಧ್ಯಕ್ಷರಾದ ಮುಹಮ್ಮದ್ ಇಕ್ಬಾಲ್ ಕನ್ನಂಗಾರ್ ರವರು ಮಾತನಾಡಿ ತನ್ನ ಕಾಲಾವಧಿಯಲ್ಲಿ ಡಿಕೆಯಸ್ಸಿಯ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸಿದರು. ನಂತರ ಚುನಾವಣಾಧಿಕಾರಿಯಾದ ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷರಾದ ಅಬ್ದುಲ್ ಲತೀಫ್ ಮುಲ್ಕಿ ನೇತೃತ್ವದಲ್ಲಿ 2020-21 ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.

ಗೌರವಾಧ್ಯಕ್ಷ: ಸಯ್ಯಿದ್ ತ್ವಾಹ ಬಾಪಾಕಿ ತಂಙಳ್
ಸಲಹೆಗಾರರು : ಹಾಜಿ.ಮುಹಮ್ಮದ್ ಇಕ್ಬಾಲ್ ಕಣ್ಣಂಗಾರ್, ಹಾಜಿ ಹಸನಬ್ಬ ಕೊಲ್ನಾಡ್ ಇಬ್ರಾಹಿಂ ಸಖಾಫಿ ಕೆದಂಬಾಡಿ, ಎಸ್ ಕೆ ಅಬ್ದುಲ್ ಖಾದರ್ ಉಚ್ಚಿಲ  ಹಾಜಿ  ಮೊಯ್ದೀನ್ ಕುಟ್ಟಿ ಕಕ್ಕಿಂಜೆ  ಇ.ಕೆ.ಇಬ್ರಾಹಿಂ ಕಿನ್ಯ 
ಅಧ್ಯಕ್ಷ: ಜನಾಬ್ ಅಬ್ದುಲ್ ರಹಿಮಾನ್ ಸಜಿಪ, ಪ್ರಧಾನ ಕಾರ್ಯದರ್ಶಿ: ಎಸ್. ಯೂಸುಫ್ ಅರ್ಲಪದವು. ಕೋಶಾಧಿಕಾರಿ: ಇಬ್ರಾಹಿಂ ಹಾಜಿ ಕಿನ್ಯ  ಉಪಾಧ್ಯಕ್ಷ: ಎಂ.ಇ ಮೂಳೂರು, ಅಬ್ದುಲ್ ಲತೀಫ್ ಮುಲ್ಕಿ, ನವಾಝ್ ಕೋಟೆಕಾರ್, ಅಬ್ದುಲ ಹಾಜಿ ಬೀಜಾಡಿ, ಜೊತೆ ಕಾರ್ಯದರ್ಶಿ: ಶರೀಫ್ ಬೋಳ್ಮಾರ್ ಕಮರುದ್ದೀನ್ ಗುರುಪುರ, ಇಬ್ರಾಹಿಂ ಕಳತ್ತೂರು, ಉಮ್ಮರ್ ಸುಳ್ಯ, ಲೆಕ್ಕಪರಿಶೋಧಕ: ಅಬ್ದುಲ್ಲಾ ಪೆರುವಾಯಿ  ಕನ್ವೀನರ್‍ಗಳು: ಹಸನ್ ಬಾವ ಹಳೆಯಂಗಡಿ, ಮುಹಮ್ಮದ್ ಆಲಿ ಮೂಡುತೋಟ ಹಾಜಿ. ಅಬ್ದುಲ್ ರಹಿಮಾನ್ ಸಂಟ್ಯಾರ್, ಇಕ್ಬಾಲ್ ಕುಂದಾಪುರ, ಮುಹಮ್ಮದ್ ಶುಕೂರ್ ಮನಿಲ, ಅಶ್ರಫ್ ಉಳ್ಳಾಲ ಎಂ.ಇ. ಸುಲೈಮಾನ್ ಮೂಳೂರು, ಅಶ್ರಫ್ ಸತ್ತಿಕಲ್, ಮುಸ್ತಾಕ್ ಕಿನ್ಯ, ಸಮದ್ ಬಿರಾಲಿ, ಇಸ್ಮಾಯಿಲ್ ಬಾಬಾ , ಹಮೀದ್ ಸುಳ್ಯ
ಹಾಗೂ 31 ಕಾರ್ಯಕಾರಿ  ಸಮಿತಿ ಸದಸ್ಯರನ್ನೊಳಗೊಂಡ ಕಮಿಟಿಯನ್ನು ಅಂಗೀಕರಿಸಲಾಯಿತು.

ನೂತನ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಸಜಿಪ ಮಾತನಾಡಿ, "ನೂತನ ಸಮಿತಿಯನ್ನು ಮುನ್ನಡೆಸಲು ಹಿರಿಯ ಸಮಿತಿ ನೇತಾರರ ಸಲಹೆಯೊಂದಿಗೆ  ಯುನಿಟ್ ಮಟ್ಟದಿಂದಲೇ ಎಲ್ಲಾ ಕಾರ್ಯಕರ್ತರು ಒಂದಾಗಿ ಪ್ರಯತ್ನಿಸಬೇಕಾಗಿದ್ದು, ಇದಕ್ಕಾಗಿ ಎಲ್ಲರೂ ಸಹಕರಿಸುವಂತೆ ವಿನಂತಿಸಿದರು.
ಸಭೆಯಲ್ಲಿ ಡಿ.ಕೆ.ಎಸ್.ಸಿ ಗೌರವಾಧ್ಯಕ್ಷರಾದ ಸಯ್ಯದ್ ತ್ವಾಹ ಬಾಪಾಕಿ ತಂಙಳ್ ರವರು ನಿಕಟ ಪೂರ್ವ ಸಮಿತಿಯ ಕಾರ್ಯವೈಖರಿಯನ್ನು ಪ್ರಶಂಸಿಸುತ್ತಾ ನೂತನ ಸಮಿತಿಗೆ ಶುಭ ಹಾರೈಕೆಯೊಂದಿಗೆ ಉಪದೇಶ ಹಾಗೂ ದುಃವಾ ನಿರ್ವಹಿಸಿದರು. ಈ ಸಂದರ್ಭದಲ್ಲಿ ಡಿ.ಕೆ.ಎಸ್.ಸಿ ಕಾಣಿಕೆ ಡಬ್ಬಿಯನ್ನು ತಂಙಳ್  ಬಿಡುಗಡೆಗೊಳಿಸಿದರು.  ಸಭೆಯಲ್ಲಿ ಕೇಂದ್ರ ಸಮಿತಿ ಕಾರ್ಯಧ್ಯಕ್ಷರಾದ ಹಾಜಿ. ಹಾತಿಂ ಕಂಚಿ, ಪ್ರದಾನ ಕಾರ್ಯದರ್ಶಿ ಹಸನ್ ಮೂಡುತೋಟ, ಸಂಘಟನಾ ಕಾರ್ಯದರ್ಶಿ ಅಬ್ದುಲ್ ಅಜೀಜ್ ಆತೂರು, ಅಲ್ ಇಹ್ಸಾನ್ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣ ಸಮಿತಿ ಚೆಯರ್ಮೆನ್ ಎಂ.ಇ.ಮೂಳೂರು ಮುಂತಾದವರು ನೂತನ ಸಮಿತಿಗೆ ಶುಭ ಹಾರೈಸಿದರು.

ಡಿ.ಕೆ.ಎಸ್.ಸಿ ಕೇಂದ್ರ ಸಮಿತಿಯ ಯು.ಎ.ಇ ಉಸ್ತುವಾರಿ ಹಾಜಿ.ಹಾತಿಂ ಕೂಳೂರುರವರು ಉಪಸ್ಥಿತರಿದ್ದು, ಡಿ.ಕೆ.ಎಸ್.ಸಿ ರಾಷ್ಟೀಯ ಸಮಿತಿ ಜೊತೆ ಕಾರ್ಯದರ್ಶಿ ಶರೀಫ್ ಬೋಳ್ಮಾರ್ ಹಾಗೂ ಇಬ್ರಾಹಿಂ ಕಳತ್ತೂರ್ ರವರು ಕಾರ್ಯಕ್ರಮ ನಿರೂಪಿಸಿದರು. ಯು.ಎ.ಇ. ರಾಷ್ಟೀಯ ಸಮಿತಿ ಪ್ರದಾನ ಕಾರ್ಯದರ್ಶಿ ಹಾಜಿ. ನವಾಝ್ ಕೋಟೆಕ್ಕಾರ್ ರವರು ಸ್ವಾಗತಿಸಿದರು. ನೂತನ ಪ್ರಧಾನ ಕಾರ್ಯದರ್ಶಿ ಎಸ್.ಯೂಸುಫ್ ಅರ್ಲಪದವು ಧನ್ಯವಾದ ಸಮರ್ಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News