ಕೋವಿಡ್-19 ವಿರುದ್ಧ ಸಂಘಟಿತ ಪ್ರತಿಕ್ರಿಯೆ: ಜಿ-20 ರಾಷ್ಟ್ರಗಳಿಗೆ ದೊರೆ ಸಲ್ಮಾನ್ ಕರೆ

Update: 2020-11-21 17:10 GMT

ರಿಯಾದ್,ನ.21: ವಿಶ್ವದ ಬಲಾಢ್ಯ ಆರ್ಥಿಕ ಶಕ್ತಿಗಳ ಒಕ್ಕೂಟವಾದ ಜಿ-20 ಶೃಂಗಸಭೆಯನ್ನು ಸೌದಿ ಆರೇಬಿಯದ ದೊರೆ ಸಲ್ಮಾನ್ ಶನಿವಾರ ಉದ್ಘಾಟಿಸಿದರು. ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆದ ಈ ಶೃಂಗಸಭೆಯಲ್ಲಿ ಉದ್ಘಾಟನಾ ಭಾಷಣ ಮಾಡಿದ ದೊರೆ ಸಲ್ಮಾನ್, ಕೋವಿಡ್-19 ಸಾಂಕ್ರಾಮಿಕವು ಅಲ್ಪ ಅವಧಿಯಲ್ಲಿ ಇಡೀ ಜಗತ್ತಿಗೆ ಹಿಂದೆಂದೂ ಇಲ್ಲದಂತಹ ಆಘಾತವನ್ನುಂಟು ಮಾಡಿದ್ದು, ಆರ್ಥಿಕ ಹಾಗೂ ಸಾಮಾಜಿಕ ಹಾನಿಯನ್ನುಂಟು ಮಾಡಿದೆ ಎಂದು ಹೇಳಿದರು. ಕೋವಿಡ್-19 ವಿರುದ್ಧ ಜಿ-20 ರಾಷ್ಟ್ರಗಳು ಸಂಘಟಿತ ಹೋರಾಟ ನಡೆಸುವಂತೆ ಅವರು ಕರೆ ನೀಡಿದರು.

 ಕೊರೋನ ಹಾವಳಿಯಿಂದ ತತ್ತರಿಸಿರುವ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಂದ ಸಮನ್ವಯದೊಂದಿಗೆ ನೆರವು ಒದಗಿಸುವಂತೆ ಸೌದಿ ದೊರೆ ಜಿ-20 ನಾಯಕರಿಗೆ ಆಗ್ರಹಿಸಿದರು. ಸಣ್ಣ ಹಾಗೂ ದುರ್ಬಲ ಉದ್ಯಮಗಳಿಗೆ ನೆರವಾಗಲು ಜಾಗತಿಕ ಆರ್ಥಿಕತೆಗೆ 11 ಟ್ರಿಲಿಯನ್ ಡಾಲರ್‌ಗಳನ್ನು ಒದಗಿಸುವಂತೆಯೂ ಅವರು ಕರೆ ನೀಡಿದರು.

 2021ರ ಮಧ್ಯಂತದವರೆಗೆ ಜಗತ್ತಿನ ಬಡರಾಷ್ಟ್ರಗಳ ಸಾಲ ಪಾವತಿಯನ್ನು ಅಮಾನತಿನಲ್ಲಿರಿಸುವ ಮೂಲಕ ಅವು ಆರೋಗ್ಯ ಪಾಲನೆ ಕ್ಷೇತ್ರದಲ್ಲಿ ಹೆಚ್ಚು ಹಣ ವ್ಯಯಿಸಲು ಅವಕಾಶ ನೀಡಿದ್ದಕ್ಕಾಗಿ ಜಿ-20 ನಾಯಕರಿಗೆ ದೊರೆ ಸಲ್ಮಾನ್ ಅಭಿನಂದನೆ ಸಲ್ಲಿಸಿದರು.

ಈ ವರ್ಷದ ಅಧ್ಯಕ್ಷ ಸ್ಥಾನವನ್ನು ಸೌದಿ ಆರೇಬಿಯ ವಹಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News