ಯುಎಇ ಪ್ರವಾಸಿಗರ ವೀಸಾ ಅವಧಿ 1 ತಿಂಗಳಿಗೆ ವಿಸ್ತರಣೆ

Update: 2020-12-29 17:34 GMT

 ದುಬೈ,ಡಿ.29: ರೂಪಾಂತರಿ ಕೊರೋನ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಕೆಲವು ವಿಮಾನ ನಿಲ್ದಾಣಗಳನ್ನು ಮುಚ್ಚುಗಡೆಗೊಳಿಸಿರುವ ಕಾರಣ, ಯುಎಇಗೆ ಈಗಾಗಲೇ ಆಗಮಿಸಿರುವ ಸಂದರ್ಶಕರು ಸಂಕಷ್ಟಕ್ಕೀಡಾಗಿರುವುದರಿಂದ ಅವರ ಪ್ರವಾಸಿ ವೀಸಾಗಳನ್ನು ಒಂದು ತಿಂಗಳವರೆಗೆ ವಿಸ್ತರಿಸಲಾಗಿದೆ.

 ಯುಎಇನ ಪ್ರಧಾನಿ ಹಾಗೂ ದುಬೈನ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ಅವರು ಈ ಬಗ್ಗೆ ಮಂಗಳವಾರ ಆದೇಶವೊಂದನ್ನು ಹೊರಡಿಸಿದ್ದಾರೆ.

 ಈ ಆದೇಶದ ಪ್ರಕಾರ ಯುಎಇ ಸಂದರ್ಶಿಸುವ ಎಲ್ಲಾ ಪ್ರವಾಸಿಗರ ವೀಸಾ ಒಂದು ತಿಂಗಳ ಅವಧಿಗೆ ಯಾವುದೇ ಶುಲ್ಕವಿಲ್ಲದೆ ವಿಸ್ತರಣೆಯಾಗಲಿದೆ. ಈ ನಿರ್ಧಾರದಿಂದಾಗಿ ಹೊಸ ವರ್ಷದ ರಜಾದಿನಳಗಳನ್ನು ಕಳೆಯಲು ಯುಎಇಗೆ ಆಗಮಿಸಿದ್ದ ಪ್ರವಾಸಿಗರು ಸಮಾಧಾನದ ನಿಟ್ಟುಸಿರೆಳೆಯುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News