ಯುಎಇ: ತುಂಬೆ ಮೆಡಿಸಿಟಿಗೆ ಕೇಂದ್ರ ಸಚಿವ ವಿ.ಮುರಳೀಧರನ್ ಭೇಟಿ

Update: 2021-01-21 17:29 GMT

ಅಜ್ಮಾನ್ (ಯುಎಇ), ಜ. 21: ಭಾರತದ ಸಹಾಯಕ ವಿದೇಶಾಂಗ ವ್ಯವಹಾರಗಳ ಸಚಿವ ವಿ. ಮುರಳೀಧರನ್ ಅವರು ಗುರುವಾರ ಇಲ್ಲಿಯ ತುಂಬೆ ಗ್ರೂಪ್‌ನ ತುಂಬೆ ಮೆಡಿಸಿಟಿಗೆ ಭೇಟಿ ನೀಡಿದರು. ತುಂಬೆ ಮೆಡಿಸಿಟಿ ವೈದ್ಯಕೀಯ ಶಿಕ್ಞಣ, ಆರೋಗ್ಯ ರಕ್ಷಣೆ ಮತ್ತು ಸಂಶೋಧನೆಗಳ ಪ್ರಮುಖ ಕೇಂದ್ರವಾಗಿದೆ.

ಯುಎಇಯಲ್ಲಿ ಭಾರತದ ಕಾನ್ಸುಲ್ ಜನರಲ್ ಡಾ. ಅಮನ್ ಪುರಿ ಮತ್ತು ರಾಜತಾಂತ್ರಿಕ ವಿಪುಲ್ ಅವರು ಸಚಿವರೊಂದಿಗಿದ್ದರು.

ಗಲ್ಫ್ ಮೆಡಿಕಲ್ ವಿವಿ ಸೇರಿದಂತೆ ತುಂಬೆ ಸಿಟಿಯಲ್ಲಿನ ಆಧುನಿಕ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜನ್ನು ವೀಕ್ಷಿಸಿದ ಮುರಳೀಧರನ್ ಇಲ್ಲಿರುವ ಅತ್ಯಾಧುನಿಕ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಇವುಗಳನ್ನು ಸಾಧಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗಾಗಿ ತುಂಬೆ ಗ್ರೂಪ್‌ನ ಸ್ಥಾಪಕ ಡಾ. ತುಂಬೆ ಮೊಯ್ದೀನ್ ಅವರನ್ನು ಮತ್ತು ಪ್ರದೇಶದಲ್ಲಿ ಆರೋಗ್ಯ ರಕ್ಷಣೆ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಸಿಕೊಳ್ಳುವಲ್ಲಿ ಮತ್ತು ವಿನೂತನೆಗಳನ್ನು ತರುವಲ್ಲಿ ತುಂಬೆ ಗ್ರೂಪ್‌ನ ಪ್ರಯತ್ನಗಳನ್ನು ಪ್ರಶಂಸಿಸಿದರು.

ಸಚಿವರನ್ನು ಸ್ವಾಗತಿಸಿದ ಡಾ. ತುಂಬೆ ಮೊಯ್ದೀನ್ ಅವರು ತುಂಬೆ ಮೆಡಿಸಿಟಿಯ ಸೇವೆಗಳು ಮತ್ತು ಸಾಧನೆಗಳ ಬಗ್ಗೆ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News