ರೀ ಎಂಟ್ರಿ ವೀಸಾದಲ್ಲಿ ವಾಪಸಾಗದವರಿಗೆ 3 ವರ್ಷದ ತನಕ ಸೌದಿ ನಿರ್ಬಂಧ

Update: 2021-01-31 17:00 GMT

ರಿಯಾದ್,ಫೆ.1: ಎಕ್ಸಿಟ್ ಹಾಗೂ ರೀ ಎಂಟ್ರಿ ವೀಸಾ ಮೂಲಕ ದೇಶದಿಂದ ನಿರ್ಗಮಿಸಿದವರು ಮತ್ತು ವೀಸಾ ಅವಧಿ ಕೊನೆಗೊಳ್ಳುವ ಮೊದಲು ವಾಪಸ್ ಬಾರದೆ ಇದ್ದವರು, ಮೂರು ವರ್ಷಗಳ ಅವಧಿಗೆ ಸೌದಿ ಅರೇಬಿಯಕ್ಕೆ ಮರಳಿ ಪ್ರವೇಶಿಸುವುದಕ್ಕೆ ಅವಕಾಶವಿಲ್ಲವೆಂದು ಆ ದೇಶದ ಪಾಸ್‌ಪೋರ್ಟ್‌ಗಳ ಮಹಾನಿರ್ದೇಶನಾಲಯ (ಜವಾಝತ್) ಸ್ಪಷ್ಟಪಡಿಸಿದೆ.

ಆದರೆ, ಹಿಂದಿನ ಉದ್ಯೋಗದಾತರ ಬಳಿಗೆ ಹೊಸ ಉದ್ಯೋಗ ವೀಸಾ (ವರ್ಕ್ ವೀಸಾ) ದೊಂದಿಗೆ ವಾಪಸ್ ಆಗಮಿಸಿರುವವವರಿಗೆ ಈ ನಿಬಂಧನೆಗಳು ಅನ್ವಯವಾಗುವುದಿಲ್ಲವೆಂದು ಅದು ತಿಳಿಸಿದೆ.

ವರ್ಷಗಳ ಹಿಂದೆ ನಿರ್ಗಮನ ಹಾಗೂ ಪುನರಾಗಮನ ವೀಸಾದ ಮೂಲಕ ಸೌದಿಯಿಂದ ಹೊರಗೆ ಹೋದವರು ಮತ್ತು ವೀಸಾ ಅವಧಿ ಮುಗಿಯುವ ಮೊದಲು ವಾಪಸ್ ಬಾರದೆ ಇದ್ದ ಹಲವಾರು ಅನಿವಾಸಿಗಳು ಈ ಬಗ್ಗೆ ಮಾಹಿತಿ ಕೋರುತ್ತಿರುವ ಹಿನ್ನೆಲೆಯಲ್ಲಿ ಜವಾಝತ್ ಈ ಸ್ಪಷ್ಟನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News