ಕುವೈತ್: ವಲಸಿಗರಿಗೆ ಹೊಟೇಲ್ ಕ್ವಾರಂಟೈನ್ ಕಡ್ಡಾಯ

Update: 2021-02-20 16:55 GMT

ಕುವೈತ್ ಸಿಟಿ, ಫೆ. 20: ಕುವೈತ್ ನಾಗರಿಕರಲ್ಲದ ವಲಸಿಗರು ಫೆಬ್ರವರಿ 21 ರವಿವಾರದಿಂದ ದೇಶ ಪ್ರವೇಶಿಸಲು ಕುವೈತ್ ಅನುಮೋದನೆ ನೀಡಿದೆ ಎಂದು ನಾಗರಿಕ ವಾಯುಯಾನ ಪ್ರಾಧಿಕಾರ ಶುಕ್ರವಾರ ನೀಡಿದ ಹೇಳಕೆಯೊಂದರಲ್ಲಿ ತಿಳಿಸಿದೆ.

 ಅದೇ ವೇಳೆ, ಇಂಥ ಪ್ರಯಾಣಿಕರಿಗಾಗಿ ಅದು ಕೆಲವು ನಿರ್ಬಂಧಗಳನ್ನು ವಿಧಿಸಿದೆ. ಅತಿ ಅಪಾಯಕಾರಿ ದೇಶಗಳಿಂದ ನೇರ ವಿಮಾನಗಳಲ್ಲಿ ಬರುವ ಪ್ರಯಾಣಿಕರು ಹೊಟೇಲ್‌ನಲ್ಲಿ 14 ದಿನಗಳ ಕ್ವಾರಂಟೈನ್‌ಗೆ ಒಳಪಡಬೇಕು. ಜಗತ್ತಿನ ಇತರ ಭಾಗಗಳಿಂದ ಬರುವವರು ಒಂದು ವಾರ ಹೊಟೇಲ್‌ನಲ್ಲಿ ಕ್ವಾರಂಟೈನ್ ಪೂರೈಸಬೇಕು ಹಾಗೂ ಇನ್ನೊಂದು ವಾರವನ್ನು ಮನೆಯಲ್ಲಿ ಕಳೆಯಬೇಕು.

ಕೊರೋನ ವೈರಸ್ ಪ್ರಕರಣಗಳನ್ನು ನಿಭಾಯಿಸುವುದಕ್ಕಾಗಿ, ತನ್ನ ನಾಗರಿಕರಲ್ಲದವರು ದೇಶಕ್ಕೆ ಬರುವುದನ್ನು ಫೆಬ್ರವರಿ 7ರಿಂದ ಎರಡು ವಾರಗಳ ಕಾಲ ಕುವೈತ್ ನಿಷೇಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News