ಯುಎಇ: ಗಲ್ಫ್ ಮೆಡಿಕಲ್ ವಿವಿಯಿಂದ ವಾರ್ಷಿಕ ಜಾಗತಿಕ ದಿನಾಚರಣೆ

Update: 2021-03-17 11:35 GMT

ಅಜ್ಮಾನ್, ಮಾ.17: ತುಂಬೆ ಸಮೂಹ ಒಡೆತನದ ಗಲ್ಫ್ ಮೆಡಿಕಲ್ ವಿವಿ (ಜಿಎಂಯು)ಯ ವಾರ್ಷಿಕ ಜಾಗತಿಕ ದಿನವನ್ನು ಮಾ.15ರಂದು ವಿಜೃಂಭಣೆಯಿಂದ ಆಚರಿಸಲಾಯಿತು.

86 ದೇಶಗಳ ವಿದ್ಯಾರ್ಥಿಗಳ ಸಂಸ್ಕೃತಿ ಮತ್ತು ಸಂಪ್ರದಾಯಗಳು ಈ ಕಾರ್ಯಕ್ರಮದಲ್ಲಿ ಮೇಳೈಸಿದ್ದವು. ಸೀಮಿತ ಸಂಖ್ಯೆಯ ಸಭಿಕರೊಂದಿಗೆ ವರ್ಚುವಲ್ ಆಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಯ ವಿದ್ಯಾರ್ಥಿ ವ್ಯವಹಾರಗಳ ವಿಭಾಗವು ವಿದ್ಯಾರ್ಥಿಗಳು ಜಿಎಂಯು ಮತ್ತು ಸಿಬ್ಬಂದಿಗಳ ಸಾಂಸ್ಕೃತಿಕ ವೈವಿಧ್ಯಗಳನ್ನು ಉತ್ತೇಜಿಸಲು ಪ್ರತಿ ವರ್ಷ ಜಾಗತಿಕ ದಿನವನ್ನು ಆಚರಿಸುತ್ತದೆ. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಎಂಯು ಚಾನ್ಸಲರ್ ಪ್ರೊ.ಹೋಶಮ್ ಹಮ್ದಿ ಅವರು ವಾರ್ಷಿಕ ಜಾಗತಿಕ ದಿನವು ಜಿಎಂಯು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳ ಏಕತೆಯನ್ನು ಆಚರಿಸುವ ಸಂದರ್ಭವಾಗಿದ್ದು, ವಿವಿಯ ‘ವೈವಿಧ್ಯತೆಯಲ್ಲಿ ಏಕತೆ ’ಧ್ಯೇಯಕ್ಕೆ ಒತ್ತು ನೀಡುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ತಮ್ಮ ದೇಶಗಳ ಸಂಸ್ಕೃತಿ ಮತ್ತು ಇತಿಹಾಸಕ್ಕೆ ಅನುಗುಣವಾಗಿ ಆಹಾರ ಮತ್ತು ಉಡುಪು ವೈವಿಧ್ಯಗಳನ್ನು ಆನ್‌ಲೈನ್‌ನಲ್ಲಿ ಪ್ರದರ್ಶಿಸಿದರು. ವಿವಿಯ ವೈಸ್ ಚಾನ್ಸಲರ್‌ಗಳು ಮತ್ತು ಡೀನ್‌ಗಳು ವಿದ್ಯಾರ್ಥಿಗಳಿಗೆ ಜೊತೆ ನೀಡಿದ್ದರು.

ವಿದ್ಯಾರ್ಥಿಗಳು ಮತ್ತು ವಿವಿಯ ಸಿಬ್ಬಂದಿಗಳು, ಅವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಸೇರಿದಂತೆ 1,000ಕ್ಕೂ ಅಧಿಕ ಜನರು ಈ ಆನ್‌ಲೈನ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಯುಎಇ, ನೈಜೀರಿಯಾ, ಪಾಕಿಸ್ತಾನ, ಭಾರತ, ಸೌದಿ ಅರೇಬಿಯಾ, ಸುಡಾನ್, ಫ್ರಾನ್ಸ್ ಮತ್ತು ಇರಾಕ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದೇಶಗಳಲ್ಲಿ ಸೇರಿದ್ದವು. ಕಾರ್ಯಕ್ರಮಗಳಲ್ಲಿ ಪಾಕಿಸ್ತಾನವು ಮೊದಲ ಸ್ಥಾನ ಪಡೆದರೆ ಎರಡನೇ ಸ್ಥಾನವನ್ನು ನೈಜೀರಿಯಾ ಮತ್ತು ಭಾರತ ಮೂರನೇ ಸ್ಥಾನವನ್ನು ಪಡೆದುಕೊಂಡವು. ಕಲಾ ವಿಭಾಗದಲ್ಲಿ ಯುಎಇ ಮೊದಲ ಸ್ಥಾನವನ್ನು ಗೆದ್ದುಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News