ಭಾರತದಿಂದ ಯುಎಇಗೆ ಪ್ರಯಾಣಿಕ ವಿಮಾನ ಸ್ಥಗಿತ ಮೇ 14 ರವರೆಗೆ ವಿಸ್ತರಣೆ

Update: 2021-04-29 17:59 GMT

ದುಬೈ: ಭಾರತದಿಂದ ಯುಎಇಗೆ ಪ್ರಯಾಣಿಕ ವಿಮಾನ ಯಾನದ ಸ್ಥಗಿತದ  ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಟ್ರಾವೆಲ್ ಏಜೆಂಟರಿಗೆ ತಿಳಿಸಲಾಗಿದೆ.

ಗುರುವಾರ ಭಾರತದಲ್ಲಿ  3,79,257 ಹೊಸ  ಕೋವಿಡ್ -19 ಪ್ರಕರಣಗಳು ಪತ್ತೆಯಾಗಿ ಮತ್ತೊಂದು ಜಾಗತಿಕ ದಾಖಲೆ ನಿರ್ಮಾಣವಾದ ಬಳಿಕ  ಈ ನಿರ್ಧಾರ ಹೊರಬಂದಿದೆ.

ಮೇ 14 ರವರೆಗೆ ಸ್ಥಗಿತದ ಆದೇಶ ಜಾರಿಯಲ್ಲಿರುತ್ತದೆ ಎಂದು ಸುತ್ತೋಲೆಯಲ್ಲಿ ಎಮಿರೇಟ್ಸ್ ಏರ್ ಲೈನ್  ​​ಏಜೆಂಟರಿಗೆ ತಿಳಿಸಿದೆ.

ಕಳೆದ 14 ದಿನಗಳಲ್ಲಿ ಭಾರತದ ಮೂಲಕ ಸಾಗಿ ಬಂದ ಪ್ರಯಾಣಿಕರಿಗೆ ಬೇರೆ ಯಾವುದೇ ಸ್ಥಳದಿಂದ ಯುಎಇಗೆ ಹತ್ತಲು ಅನುಮತಿ ಇಲ್ಲ.

ಇದಕ್ಕೂ ಮೊದಲು ಎಪ್ರಿಲ್ 24 ರಂದು ರಾತ್ರಿ 11.59 ರಿಂದ ಭಾರತದಿಂದ ಯುಎಇಗೆ ಎಲ್ಲಾ ವಿಮಾನಗಳನ್ನು 10 ದಿನಗಳವರೆಗೆ ಸ್ಥಗಿತಗೊಳಿಸಲಾಗಿತ್ತು.

ಉಭಯ ದೇಶಗಳ ನಡುವಿನ ಕಾರ್ಗೋ ವಿಮಾನ ಹಾರಾಟಕ್ಕೆ ಯಾವುದೇ ತೊಂದರೆಯಾಗುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News