ಯುಎಇ ಜಿನೋಮಿಕ್ಸ್ ಕೌನ್ಸಿಲ್ ಗೆ ಶೇಖ್ ಮುಹಮ್ಮದ್ ಅಂಗೀಕಾರ

Update: 2021-06-15 17:31 GMT
photo-twitter 

ದುಬೈ (ಯುಎಇ), ಜೂ. 15: ಎಮಿರಾತಿ ವಂಶವಾಹಿ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳುವುದಕ್ಕಾಗಿ ಯುಎಇಯಲ್ಲಿ ನೂತನ ಸಮಿತಿಯೊಂದನ್ನು ಸ್ಥಾಪಿಸಲಾಗಿದೆ. ಎಮಿರಾತ ವಂಶವಾಹಿ ಕಾರ್ಯಕ್ರಮವು ಅರಬ್ ವಂಶವಾಹಿಯ ಅಧ್ಯಯನಕ್ಕಾಗಿ ಮುಡುಪಾಗಿಟ್ಟ ಜಗತ್ತಿನ ಪ್ರಥಮ ಕಾರ್ಯಕ್ರಮವಾಗಿದೆ.

ಜಾಗತಿಕ ದರ್ಜೆಯ ಆರೋಗ್ಯರಕ್ಷಣೆ ವ್ಯವಸ್ಥೆಯೊಂದನ್ನು ಸೃಷ್ಟಿಸುವ ದೇಶದ ಮಹತ್ವಾಕಾಂಕ್ಷೆಗೆ ಪೂರಕವಾಗಿ ಯುಎಇ ಜಿನೋಮಿಕ್ಸ್ ಕೌನ್ಸಿಲನ್ನು ರೂಪಿಸಲಾಗಿದೆ. 

ಯುಎಇ ಉಪಾಧ್ಯಕ್ಷ ಹಾಗೂ ಪ್ರಧಾನಿ ಹಾಗೂ ದುಬೈ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಮ್ ಇದಕ್ಕೆ ಅನುಮೋದನೆ ನೀಡಿದ್ದಾರೆ.

ಅಬುಧಾಬಿ ಕಾರ್ಯಕಾರಿ ಮಂಡಳಿಯ ಸದಸ್ಯ ಹಾಗೂ ಅಬುಧಾಬಿ ಕಾರ್ಯಕಾರಿ ಕಚೇರಿಯ ಅಧ್ಯಕ್ಷ ಶೇಖ್ ಖಾಲಿದ್ ಬಿನ್ ಮುಹಮ್ಮದ್ ಬಿನ್ ಝಾಯಿದ್ ಅಲ್ ನಹ್ಯಾನ್ ನೇತೃತ್ವದ ನೂತನ ಸಮಿತಿಯು, ದೇಶಾದ್ಯಂತವಿರುವ ಆರೋಗ್ಯರಕ್ಷಣೆ ವ್ಯವಸ್ಥೆಗೆ ಎಮಿರಾಟಿ ವಂಶವಾಹಿ ಕಾರ್ಯಕ್ರಮವನ್ನು ವಿಲೀನಗೊಳಿಸುವ ಪ್ರಕ್ರಿಯೆಯ ಮೇಲುಸ್ತುವಾರಿ ವಹಿಸಿಕೊಳ್ಳೂತ್ತದೆ.

ವಂಶವಾಹಿ ಅಸ್ವಸ್ಥತೆಗಳು, ವೈಕಲ್ಯಗಳು ಮತ್ತು ಮರಣ ದರವನ್ನು ಕಡಿಮೆ ಮಾಡುವ ಉದ್ದೇಶದಿಂದ ವಂಶವಾಹಿ ತಂತ್ರಜ್ಞಾನವನ್ನು ಆರೋಗ್ಯ ಸೇವೆ ವ್ಯವಸ್ಥೆಗೆ ಸೇರ್ಪಡೆಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

ಎಮಿರಾತಿ ವಂಶವಾಹಿ ಕಾರ್ಯಕ್ರಮವು ಎಮಿರಾತಿಗಳ ವಂಶವಾಹಿ ರಚನೆಯನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತದೆ; ಜನರಲ್ಲಿ ಕಂಡುಬರುವ ವಂಶವಾಹಿ ಕಾಯಿಲೆಗಳ ಸ್ವರೂಪವನ್ನು ಅಧ್ಯಯನ ಮಾಡುತ್ತದೆ; ನಿಖರ ರೋಗಪತ್ತೆ ಮತ್ತು ಸರಿಯಾದ ಚಿಕಿತ್ಸೆಯನ್ನು ಎಮಿರಾತಿಗಳಿಗೆ ನೀಡಬಲ್ಲ ನಿರ್ದಿಷ್ಟ ವ್ಯಕ್ತಿಗಳನ್ನು ಗುರಿಯಾಗಿಸಿದ ಔಷಧಗಳನ್ನು ಅಭಿವೃದ್ಧಿಪಡಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News