ಕೋವಿಡ್ ಸಾಂಕ್ರಾಮಿಕ: ಖತರ್ ನಲ್ಲಿ 80% ಸಿಬ್ಬಂದಿಗಳು ಕಚೇರಿಗೆ ಮರಳಲು ಅವಕಾಶ

Update: 2021-06-17 17:36 GMT

ದೋಹಾ, ಜೂ.17: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ನಿರ್ಬಂಧಗಳನ್ನು ಹಂತಹಂತವಾಗಿ ಸಡಿಲಿಸಲಾಗುವುದು. ಇದರಂತೆ ಜೂನ್ 18ರಿಂದ ಸರಕಾರಿ ಮತ್ತು ಖಾಸಗಿ ಕ್ಷೇತ್ರದ ಕಚೇರಿಗಳು 80% ಸಿಬಂದಿಗಳೊಂದಿಗೆ ಕಾರ್ಯ ನಿರ್ವಹಿಸಲು ಅವಕಾಶವಿದೆ ಎಂದು ಖತರ್ನ ಸಚಿವ ಸಂಪುಟ ಬುಧವಾರ ಘೋಷಿಸಿರುವುದಾಗಿ ದೇಶದ ಸುದ್ಧಿಸಂಸ್ಥೆ ವರದಿ ಮಾಡಿದೆ. 

ಆರೋಗ್ಯ, ಭದ್ರತೆ ಮತ್ತು ರಕ್ಷಣಾ ಕ್ಷೇತ್ರದ ಸಿಬಂದಿಗಳಿಗೆ ಈ ನಿರ್ಧಾರ ಅನ್ವಯಿಸುವುದಿಲ್ಲ. ಶುಕ್ರವಾರದಿಂದ ಮಾಲ್ ಗಳು, ಆಹಾರ ವಹಿವಾಟಿನ ಸ್ಥಳಗಳನ್ನು ತೆರೆಯಬಹುದು. ನಿಗದಿತ ಮಿತಿ ಹಾಗೂ ನಿಬರ್ಂಧಗಳನ್ನು ಪಾಲಿಸುವ ಷರತ್ತಿನೊಂದಿಗೆ ಮದುವೆ ಸಮಾರಂಭಕ್ಕೂ ಅವಕಾಶವಿದೆ ಎಂದು ಮೂಲಗಳು ಹೇಳಿವೆ. ಮೇ 18ರಿಂದ ಜುಲೈ 30ರವರೆಗೆ 4 ಹಂತಗಳಲ್ಲಿ ಕೊರೋನ ಸಂಬಂಧಿತ ನಿರ್ಬಂಧಗಳನ್ನು ಸಡಿಲಿಸಲು ಖತರ್ ಸರಕಾರ ನಿರ್ಧರಿಸಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News