ಸೌದಿ ಅರೇಬಿಯಾ: ಕಾನೂನು ಉಲ್ಲಂಘಿಸಿದ್ದಕ್ಕಾಗಿ ಬಂಧನದಲ್ಲಿರುವ 5.6 ಮಿಲಿಯನ್ ಜನರು

Update: 2021-06-20 17:29 GMT

ರಿಯಾದ್, ಜೂ.20: ನಿವಾಸಸ್ಥಾನ, ಉದ್ಯೋಗ ಮತ್ತು ಗಡಿ ಸುರಕ್ಷತಾ ವ್ಯವಸ್ಥೆಯನ್ನು ಉಲ್ಲಂಸಿದ್ದಕ್ಕಾಗಿ ಸೌದಿ ಅರೆಬಿಯಾದಲ್ಲಿ 5.6 ಮಿಲಿಯನ್ ಗೂ ಅಧಿಕ ಜನರನ್ನು ಬಂಧಿಸಲಾಗಿದೆ ಎಂದು ಸರಕಾರದ ವರದಿ ಹೇಳಿದೆ.

 2017ರ ನವೆಂಬರ್ 15ರಿಂದ 2021ರ ಜೂನ್ 16ರವರೆಗಿನ ಅವಧಿಯಲ್ಲಿ 5,615,884 ಮಂದಿಯನ್ನು ಅಪರಾಧಿಗಳೆಂದು ಗುರುತಿಸಲಾಗಿದೆ. ಇದರಲ್ಲಿ 4,304,206 ಮಂದಿ ನಿವಾಸಸ್ಥಾನ ಕಾನೂನನ್ನು ಉಲ್ಲಂಸಿದವರು, 802,125 ಮಂದಿ ಉದ್ಯೋಗ ನಿಯಮವನ್ನು ಉಲ್ಲಂಸಿದವರು ಮತ್ತು 509,553 ಮಂದಿ ಗಡಿ ಉಲ್ಲಂಸಿದವರು. ಗಡಿದಾಟಿ ಸೌದಿಗೆ ನುಸುಳಲು ಪ್ರಯತ್ನಿಸಿದ 116,908 ಜನರನ್ನು ಬಂಧಿಸಿದ್ದು ಇದರಲ್ಲಿ 43% ಯೆಮೆನ್ ಪ್ರಜೆಗಳು. 

54% ಇಥಿಯೋಪಿಯನ್ನರು ಮತ್ತು 3% ಇತರ ದೇಶಗಳ ಪ್ರಜೆಗಳಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸೌದಿಯ ಗಡಿದಾಟಿ ನೆರೆಯ ದೇಶಕ್ಕೆ ತೆರಳಲು ಪ್ರಯತ್ನಿಸಿದ 9,508 ಜನರನ್ನು ಬಂಧಿಸಲಾಗಿದೆ. ಅಕ್ರಮ ಸಾಗಾಣಿಕೆ ಮತ್ತು ಆಶ್ರಯ ನೀಡಿದ ಅಪರಾಧಕ್ಕೆ 8,222 ಜನರನ್ನು ಬಂಧಿಸಲಾಗಿದೆ. ಸ್ಥಳೀಯ ಕಾನೂನನ್ನು ಉಲ್ಲಂಸಿ ಆಶ್ರಯ ನೀಡಿದ್ದಕ್ಕೆ ಸುಮಾರು 2,766 ಸೌದಿ ಪ್ರಜೆಗಳನ್ನು ಬಂಧಿಸಲಾಗಿದೆ. 53,916 ಜನರ ವಿರುದ್ಧ ಕಾನೂನು ಪ್ರಕ್ರಿಯೆ ಜರಗಿಸಲಾಗಿದ್ದು ಇವರಲ್ಲಿ 49,954 ಪುರುಷರು ಮತ್ತು 3,962 ಮಹಿಳೆಯರು ಎಂದು ವರದಿ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News