ಲಸಿಕೆ ಪಡೆಯದ ಉದ್ಯೋಗಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೌದಿ ಸರಕಾರ ಸೂಚನೆ

Update: 2021-08-02 16:07 GMT

ಜೆದ್ದಾ, ಆ.2: ಸೌದಿ ಅರೆಬಿಯಾದ ಸರಕಾರಿ, ಖಾಸಗಿ ಮತ್ತು ಸಮಾಜಸೇವಾ ಸಂಸ್ಥೆಗಳಲ್ಲಿ ಲಸಿಕೆ ಪಡೆಯದ ಉದ್ಯೋಗಿಗಳಿದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಲ್ಲಿನ ಮಾನವಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಇಲಾಖೆ ಸೂಚಿಸಿದೆ ಎಂದು ವರದಿಯಾಗಿದೆ.

ಈ ಬಗ್ಗೆ ರವಿವಾರ ಹೇಳಿಕೆ ಹೊರಡಿಸಿರುವ ಇಲಾಖೆ, ಕೋವಿಡ್ ಲಸಿಕೆ ಪಡೆಯುವವರೆಗೆ ಅವರ ರಜಾ ದಿನಗಳನ್ನು ಕಡಿತಗೊಳಿಸಬೇಕು ಎಂದಿದೆ. ದೇಶದ ಎಲ್ಲಾ ಉದ್ಯೋಗ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಲಸಿಕೆ ಪಡೆದ ಪ್ರಮಾಣ ಪತ್ರ ಹೊಂದಿರಬೇಕು. ಲಸಿಕೆ ಪಡೆಯದ ಸಿಬಂದಿಗಳು ಕೆಲಸದ ಅಗತ್ಯವನ್ನು ಹೊಂದಿಕೊಂಡು ಮನೆಯಲ್ಲೇ ಕೆಲಸ ಮಾಡಬಹುದು. ಒಂದು ವೇಳೆ ಮನೆಯಿಂದಲೇ ಕೆಲಸ ಮಾಡುವುದು ಉದ್ಯೋಗದಾತರಿಗೆ ಅನುಕೂಲಕರವಾಗಿಲ್ಲದಿದ್ದರೆ, ಆಗಸ್ಟ್ 9ರ ಬಳಿಕ ಆ ಸಿಬಂದಿಗಳಿಗೆ ರಜೆ ನೀಡಿ, ಆ ರಜೆಯನ್ನು ಅವರ ಅಧಿಕೃತ ರಜೆಯಿಂದ ಕಡಿತಗೊಳಿಸಬೇಕು . ಒಂದು ವೇಳೆ ಸಿಬಂದಿಗಳ ರಜೆ ಮುಗಿದಿದ್ದರೆ, ಅವರ ನಿಗದಿತ ರಜೆಯಿಂದ ಕಡಿತಗೊಳಿಸಬೇಕು. ಅಥವಾ ವೇತನಸಹಿತ ರಜೆಯೆಂದು ಪರಿಗಣಿಸುವಂತೆ ಇಲಾಖೆ ಸೂಚಿಸಿದೆ.

ಖಾಸಗಿ ಮತ್ತು ಸಮಾಜಸೇವಾ ಸಂಸ್ಥೆಗಳಲ್ಲಿ, ಲಸಿಕೆ ಪಡೆಯದ ಸಿಬಂದಿಗಳು ರಜೆಯಲ್ಲಿ ತೆರಳಬೇಕು ಮತ್ತು ಈ ರಜೆಯನ್ನು ಅವರ ವಾರ್ಷಿಕ ರಜೆಯಿಂದ ಕಡಿತಗೊಳಿಸುವಂತೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News