ಪ್ರಯಾಣ ನಿರ್ಬಂಧವಿರುವ 6 ದೇಶಗಳಲ್ಲಿರುವ ಯುಎಇ ನಿವಾಸಿಗಳು ಸ್ವದೇಶಕ್ಕೆ ಹಿಂದಿರುಗಲು ಅನುಮತಿ

Update: 2021-08-03 11:41 GMT
ಸಾಂದರ್ಭಿಕ ಚಿತ್ರ (PTI)

ದುಬೈ: ಪ್ರಯಾಣಿಕರ ನಿರ್ಬಂಧವಿರುವ ಆರು ದೇಶಗಳಲ್ಲಿರುವ ಸಂಯುಕ್ತ ಅರಬ್ ಸಂಸ್ಥಾನದ ನಿವಾಸಿಗಳು ಸ್ವದೇಶಕ್ಕೆ ವಾಪಸಾಗಬಹುದು ಎಂದು ಅಲ್ಲಿನ ಅಧಿಕಾರಿಗಳು ಇಂದು ತಿಳಿಸಿದ್ದಾರೆ. ಈ ವಿನಾಯಿತಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ನೇಪಾಳ, ನೈಜೀರಿಯಾ ಮತ್ತು ಉಗಾಂಡದಲ್ಲಿರುವ ಯುಎಇ ನಿವಾಸಿಗಳಿಗೆ ಅನ್ವಯವಾಗುತ್ತದೆ.

ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದವರು ಹಾಗೂ ಮಾನ್ಯ ಯುಎಇ ನಿವಾಸಿ ಪರ್ಮಿಟ್ ಹೊಂದಿರುವವರಿಗೆ ಆಗಸ್ಟ್ 5ರಿಂದ ಸಂಯುಕ್ತ ಅರಬ್ ಸಂಸ್ಥಾನಕ್ಕೆ ಪ್ರವೇಶ ದೊರಕಲಿದೆ.

ಆದರೆ ಅವರು ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದು ಕನಿಷ್ಠ 14 ದಿನಗಳಾಗಿರಬೇಕು ಹಾಗೂ ಲಸಿಕೆ ಪಡೆದ ಪ್ರಮಾಣಪತ್ರವನ್ನೂ ಅವರು ಹೊಂದಿರಬೇಕು.

ದೇಶದ ರಾಷ್ಟ್ರೀಯ ತುರ್ತುಪರಿಸ್ಥಿತಿ  ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರ ಇಂದು ಘೋಷಿಸಿದ ಹಲವಾರು ಸಡಿಲಿಕೆಗಳಲ್ಲಿ ಮೇಲಿನ ಕ್ರಮವೂ ಸೇರಿದೆ.

ಇನ್ನೊಂದು ನಿಯಮ ಸಡಿಲಿಕೆಯ ಪ್ರಕಾರ ಲಸಿಕೆ ಪಡೆದ ಹಾಗೂ ಪಡೆಯದವರಿಗೂ ಆಗಸ್ಟ್ 5ರಿಂದ ದೇಶಕ್ಕೆ ಅನುಮತಿಯಿದೆ.

ಯಾರಿಗೆಲ್ಲ ಅನುಮತಿಯಿದೆ?

►ಯುಎಇಯಲ್ಲಿ ಉದ್ಯೋಗದಲ್ಲಿರುವ ಆರೋಗ್ಯ ಕಾರ್ಯಕರ್ತರು, ವೈದ್ಯರು, ನರ್ಸುಗಳು ಹಾಗೂ ತಂತ್ರಜ್ಞರು.

►ಯುಎಇಯಲ್ಲಿ ಶಿಕ್ಷಣ ಕ್ಷೇತ್ರಗಳಲ್ಲಿ ದುಡಿಯುವವರು.

►ದೇಶದ ವಿದ್ಯಾರ್ಥಿಗಳು

►ಮಾನವೀಯ ನೆಲೆಯಲ್ಲಿ ಮಾನ್ಯವಾದ ನಿವಾಸಿ ಪರ್ಮಿಟ್ ಹೊಂದಿರುವವರಿಗೆ

►ಸರಕಾರ ಹಾಗೂ ಸ್ಥಳೀಯಾಡಳಿತಗಳಲ್ಲಿ ಉದ್ಯೋಗದಲ್ಲಿರುವರಿಗೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News