ಅಬುಧಾಬಿ ವಿಮಾನ ನಿಲ್ದಾಣದಲ್ಲಿ ತೈಲ ಟ್ಯಾಂಕರ್‌ ಗಳ ಗುರಿಯಾಗಿಸಿ ಸ್ಫೋಟ: ಡ್ರೋನ್‌ ದಾಳಿಯಾಗಿರುವ ಕುರಿತು ಶಂಕೆ

Update: 2022-01-17 10:50 GMT
ಸಾಂದರ್ಭಿಕ ಚಿತ್ರ

ಅಬುಧಾಬಿ: ಯುಎಇಯ ಪ್ರಮುಖ ನಗರವಾದ ಅಬುಧಾಬಿಯಲ್ಲಿನ ವಿಮಾನ ನಿಲ್ದಾಣದಲ್ಲಿದ್ದ ಮೂರು ತೈಲ ಟ್ಯಾಂಕರ್‌ ಗಳು ಸ್ಫೋಟಗೊಂಡಿದ್ದು, ಅಗ್ನಿ ಅನಾಹುತ ಸಂಭವಿಸಿದೆ. ಈ ಘಟನೆಯ ಹಿಂದೆ ಡ್ರೋನ್‌ ದಾಳಿಯ ಸಂಭಾವ್ಯತೆಯ ಕುರಿತು ಅಧಿಕಾರಿಗಳು ಶಂಕಿಸಿದ್ದಾರೆ ಎಂದು bloomberg ವರದಿ ಮಾಡಿದೆ.

ಯೆಮೆನ್‌ನ ಹೌತಿ ಬಂಡುಕೋರರು ದಾಳಿಯ ಹೊಣೆ ಹೊತ್ತುಕೊಂಡಿದ್ದಾರೆ. ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅಬುಧಾಬಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಗಳ ಪ್ರಕಾರ ಸಣ್ಣ ಹಾರುವ ಸ್ತುಗಳು ಅಥವಾ ಟ್ರೋನ್‌ ಗಳು ಸಮೀಪದಲ್ಲಿ ಬಿದ್ದು ಸ್ಫೋಟವುಂಟು ಮಾಡಲು ಕಾರಣವಾಗಿರಬಹುದು ಎಂದು ಯುಎಇಯ ರಾಜ್ಯ ಸುದ್ದಿಸಂಸೈಎ ವಾಮ್‌ ಹೇಳಿದೆ.

ಹೌದಿ ಬಂಡುಕೋರರು ನಿಯಮಿತವಾಗಿ ನೆರೆಯ ಸೌದಿ ಅರೇಬಿಯಾವನ್ನು ಕ್ಷಿಪಣಿಗಳು ಮತ್ತು ಡ್ರೋನ್‌ಗಳೊಂದಿಗೆ ದಾಳಿ ಮಾಡುತ್ತಿದ್ದು, ಘಟನೆಗಳಲ್ಲಿ ಅಪರೂಪವಾಗಿ ಸಾವುನೋವುಗಳು ಸಂಭವಿಸುತ್ತಿತ್ತು.. ಅವರು ಈ ಹಿಂದೆ ಯುಎಇ ಮೇಲೆ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದ್ದರೂ, ನೇರ ಹೊಡೆತಗಳು ಅಪರೂಪವಾಗಿತ್ತು. ಅಬುಧಾಬಿ ಸರ್ಕಾರ ಅಥವಾ ಯುಎಇ ವಿದೇಶಾಂಗ ಸಚಿವಾಲಯದಿಂದ ಈ ಕುರಿತು ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News